ಹಾಂಗ್‌ಕಾಂಗ್‌ನಲ್ಲಿ ಪೊಲೀಸರ ಪರ ರ್‍ಯಾಲಿ

ಬುಧವಾರ, ಜೂಲೈ 17, 2019
29 °C

ಹಾಂಗ್‌ಕಾಂಗ್‌ನಲ್ಲಿ ಪೊಲೀಸರ ಪರ ರ್‍ಯಾಲಿ

Published:
Updated:
Prajavani

ಹಾಂಗ್‌ಕಾಂಗ್‌: ಹಾಂಗ್‌ಕಾಂಗ್‌ ಪೊಲೀಸರು ಅಶ್ರುವಾಯು ಮತ್ತು ರಬ್ಬರ್‌ ಬುಲೆಟ್‌ಗಳ ಬಳಕೆ ಮಾಡುವುದರ ವಿರುದ್ಧ ಟೀಕೆಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರ ನಡೆಯನ್ನು ಬೆಂಬಲಿಸಿ ಭಾನುವಾರ ಹಾಂಗ್‌ಕಾಂಗ್‌ ಪಾರ್ಲಿಮೆಂಟ್‌ನ  ಹೊರಭಾಗ ಸಾವಿರಾರು ಜನರು ರ್‍ಯಾಲಿ ನಡೆಸಿದರು.

ನೀಲಿ ಮತ್ತು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದ್ದ ಅನೇಕ ಮಂದಿ ರ್‍ಯಾಲಿಯಲ್ಲಿ ಭಾಗವಹಿಸಿ ಪೊಲೀಸರಿಗೆ ಬೆಂಬಲ ಸೂಚಿಸಿದರು.  ಹಾಂಗ್‌ಕಾಂಗ್‌ ಅನ್ನು ಚೀನಾಕ್ಕೆ ಹಸ್ತಾಂತರಿಸುವ ಪ್ರಸ್ತಾವನೆಯನ್ನು ವಿರೋಧಿಸಿ ಜೂನ್‌ ಆರಂಭದಲ್ಲಿ ಹಾಂಗ್‌ಕಾಂಗ್‌ನಲ್ಲಿ ಎರಡು ಬೃಹತ್‌ ಪ‍್ರತಿಭಟನಾ ರ‍್ಯಾಲಿಗಳು ನಡೆದಿದ್ದವು. ಸದ್ಯಕ್ಕೆ ಈ ಪ್ರಸ್ತಾವನೆ ಕುರಿತ ನಿರ್ಧಾರವನ್ನು ಮುಂದೂ ಡಲಾಗಿದೆ. ಈ ಕುರಿತು ಅನಿರೀಕ್ಷಿತ ಘರ್ಷಣೆಗಳೂ ನಡೆದಿವೆ. 

ಜೂನ್‌ 12ರಂದು ಹಸ್ತಾಂತರ ಪ್ರಸ್ತಾವ ವಿರೋಧಿಸಿ ಪಾರ್ಲಿಮೆಂಟ್‌ನ ಹೊರಗೆ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಯುವಜನರು ಭಾಗವಹಿಸಿದ್ದು, ಈ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ರಬ್ಬರ್‌ ಬುಲೆಟ್‌ಗಳನ್ನು ಬಳಸಿದ್ದರು. ತಮ್ಮ ಕ್ರಮವನ್ನು ಪೊಲೀಸರು ಸಮರ್ಥಿಸಿಕೊಂಡಿದ್ದರೂ ವಿರೋಧಿಗಳು ಪೊಲೀಸರು ಬಲಪ್ರಯೋಗ ಮಾಡುವುದು ಸರಿಯಲ್ಲ ಎಂದು ಟೀಕಿಸಿ, ಈ ಪ್ರಕರಣದ ಬಗ್ಗೆ ತನಿಖೆಗೆ ಆಗ್ರಹಿಸಿದ್ದರು.

ಪೊಲೀಸರ ಕ್ರಮದ ಬಗ್ಗೆ ಆಕ್ರೋಶಗೊಂಡ ಜನರು ಕಳೆದ ಎರಡು ವಾರಗಳಲ್ಲಿ ಎರಡು ಬಾರಿ ಪೊಲೀಸ್‌ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !