ಶನಿವಾರ, ಮೇ 28, 2022
27 °C

ಲಂಡನ್‌ನಲ್ಲಿ ಹೈದರಾಬಾದ್‌ ವ್ಯಕ್ತಿಯ ಹತ್ಯೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಲಂಡನ್:  ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬನನ್ನು ಇಲ್ಲಿನ ಟೆಸ್ಕೋ ಸೂಪರ್‌ ಮಾರ್ಕೆಟ್‌ ಬಳಿ ಅಪರಿಚಿತ ವ್ಯಕ್ತಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.

ಮೊಹಮ್ಮದ್ ನಾದಿಮುದ್ದೀನ್ ಹತ್ಯೆಯಾದವ.  ಈತ ಆರು ವರ್ಷಗಳಿಂದ ಟೆಸ್ಕೋ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದನು. 

ನಾದಿಮುದ್ದೀನ್ ಬುಧವಾರ ಕೆಲಸ ಮುಗಿಸಿ ಮನೆಗೆ ಬಂದಿಲ್ಲ. ಈ ಬಗ್ಗೆ ಮಾರ್ಕೆಟ್‌ನ ಆಡಳಿತ ಮಂಡಳಿಯನ್ನು ಕುಟಂಬದವರು ವಿಚಾರಿಸಿದ್ದಾರೆ. ಹುಡುಕಾಟ ನಡೆಸಿದಾಗ ಈತನ ಮೃತದೇಹ ಮಾರ್ಕೆಟ್‌ನ ಪಾರ್ಕಿಂಗ್ ಸ್ಥಳದಲ್ಲಿ ದೊರೆತಿದೆ.

ಏಷಿಯನ್ ಮೂಲದ ವ್ಯಕ್ತಿಯಿಂದಲೇ ನಾದಿಮುದ್ದೀನ್ ಹತ್ಯೆಯಾಗಿದೆ ಎಂದು ಕುಟುಂಬದ ಆಪ್ತ ಫಹೀಮ್ ಖುರೇಶಿ ಶಂಕಿಸಿದ್ದಾರೆ. 

ಸುಷ್ಮಾ ಸ್ವರಾಜ್‌ಗೆ ಮೊರೆ
ನಾದಿಮುದ್ದೀನ್‌ನ ಕುಟುಂಬದವರು ಲಂಡನ್‌ಗೆ ತೆರಳಲು ಸಹಾಯ ಮಾಡಬೇಕೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಬಳಿ ಮನವಿ ಮಾಡಿದ್ದಾರೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು