ಬುಧವಾರ, ಜನವರಿ 22, 2020
22 °C

ವಾಗ್ದಂಡನೆ: ಟ್ರಂಪ್‌ ವಿರುದ್ಧ ಮತ್ತಷ್ಟು ಸಾಕ್ಷ್ಯ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧದ ವಾಗ್ದಂಡನೆ ಪ್ರಕರಣ ವಿಚಾರಣೆ ಬೆನ್ನಲ್ಲೇ ಡೆಮಾಕ್ರಟಿಕ್ ಪಕ್ಷದ ಸದಸ್ಯರು, ಟ್ರಂಪ್‌ ವಿರುದ್ಧ ಮತ್ತಷ್ಟು ಪ್ರಮುಖ ದಾಖಲೆಗಳನ್ನು ಮಂಗಳವಾರ
ಬಹಿರಂಗಪಡಿಸಿದ್ದಾರೆ. 

ಟ್ರಂಪ್‌ ಅವರ ಆಪ್ತ ವಕೀಲ ರೂಡಿ ಗಿಲಿಯಾನಿ ಅವರ ನಿಕಟವರ್ತಿ ಲೇವ್‌ ಪರ್ನಾಸ್‌ ಅವರಿಂದ ಈ ದಾಖಲೆಗಳನ್ನು ಪಡೆದುಕೊಳ್ಳಲಾಗಿದೆ. ಡೆಮಾಕ್ರಟಿಕ್‌ ಪಕ್ಷದ ಜೋ ಬಿಡೆನ್‌ ವಿರುದ್ಧ ತನಿಖೆ ನಡೆಸಲು ಉಕ್ರೇನ್‌ ಅಧ್ಯಕ್ಷರಿಗೆ ಬರೆದಿದ್ದ ಕೈಬರಹದ ಪತ್ರ ಸೇರಿದಂತೆ ಹಲವು ದಾಖಲೆಗಳು ಇದರಲ್ಲಿವೆ. 

ಉಕ್ರೇನ್‌ನಲ್ಲಿ ಅಮೆರಿಕದ ರಾಯಭಾರಿಯಾಗಿದ್ದ ಮೇರಿ ಯೊವಾನೊವಿಚ್ ಅಮಾನತು ಸಂದರ್ಭದಲ್ಲೂ ಗಿಲಿಯಾನಿ ಅವರ ಜೊತೆ ಪರ್ನಾಸ್‌ ಸಂಪರ್ಕದಲ್ಲಿರುವುದು ದಾಖಲೆಗಳಿಂದ ಬಹಿರಂಗವಾಗಿದೆ. ಮೇರಿ ಅವರ ಚಲನವಲನ ಹಾಗೂ ಮೊಬೈಲ್‌ ಕರೆಗಳ ಮೇಲೆ ರೋಬರ್ಟ್‌ ಎಫ್‌.ಹೈಡ್‌ ಎಂಬಾತ ನಿಗಾ ಇರಿಸಿ, ಪರ್ನಾಸ್‌ಗೆ ಮಾಹಿತಿ ನೀಡುತ್ತಿದ್ದ ಎನ್ನುವ ಅಂಶ ದಾಖಲೆಗಳಿಂದ ಬೆಳಕಿಗೆ ಬಂದಿದೆ. 

ಆರೋಪ ಏನು?:

ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಜೋ ಬಿಡೆನ್‌ ಸ್ಪರ್ಧಿಸಲಿದ್ದು, ಅವರ ಹೆಸರಿಗೆ ಕಳಂಕ ತರುವಂತೆ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಝೆಲೆನ್‌ಸ್ಕಿ ಅವರಿಗೆ ದೂರವಾಣಿ ಕರೆ ಮಾಡಿದ್ದರು ಎಂಬ ಆರೋಪ ಟ್ರಂಪ್‌ ವಿರುದ್ಧ ಇದೆ. ಬಿಡೆನ್‌ ಪುತ್ರ ಉಕ್ರೇನ್‌ನಲ್ಲಿ ವ್ಯವಹಾರ ಹೊಂದಿದ್ದು, ಭ್ರಷ್ಟಾಚಾರ ಆರೋಪ ಹೊರಿಸಿ ತಂದೆ–ಮಗನ ವಿರುದ್ಧ ಅಲ್ಲಿ ತನಿಖೆ ಕೈಗೊಳ್ಳುವಂತೆಯೂ ಕೇಳಿದ್ದರು. ಈ ದೂರವಾಣಿ ಸಂಭಾಷಣೆ ಬಹಿರಂಗಗೊಂಡ ನಂತರ ಟ್ರಂಪ್‌ ವಿರುದ್ಧ ವಾಗ್ದಂಡನೆ ಒತ್ತಡ ಹೆಚ್ಚಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು