ಮಂಗಳವಾರ, ಫೆಬ್ರವರಿ 18, 2020
26 °C

400 ದಿನ, 43 ದೇಶ, 1 ಲಕ್ಷ ಕಿಲೋ ಮೀಟರ್‌ ಸಂಚರಿಸಿದ ದಂಪತಿ... ಕಾರಣ ಏನು ಗೊತ್ತೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕ ಉದ್ಯಮಿಯೊಬ್ಬರು ತಮ್ಮ ಪತ್ನಿಯೊಂದಿಗೆ 400 ದಿನಗಳ ಕಾಲ ರಸ್ತೆಯ ಮೇಲೆಯೇ ಸಂಚರಿಸಿದ್ದಾರೆ. ಅಂಗ ದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು 43 ದೇಶಗಳನ್ನು ಸುತ್ತಿರುವ ಅನಿಲ್‌ ಶ್ರೀವಸ್ತ ಮತ್ತು ದೀಪಾಲಿ ದಂಪತಿ ತಮ್ಮ ಕಾರಿನಲ್ಲಿ 1 ಲಕ್ಷ ಕಿಲೋ ಮೀಟರ್‌ ದೂರ ಪ್ರಯಾಣ ಮಾಡಿದ್ದಾರೆ.  

2014ರಲ್ಲಿ ತಮ್ಮ ಸಹೋದರನಿಗೆ ಕಿಡ್ನಿ ದಾನ ಮಾಡಿದ ನಂತರ ಅನಿಲ್‌ ಶ್ರೀವಸ್ತ ಅವರು ಜಗತ್ತಿನಾದ್ಯಂತ ಅಂಗ ದಾನ ಜಾಗೃತಿ ಮೂಡಿಸುವ ಸಲುವಾಗಿ ಖಂಡಾಂತರ ಯಾತ್ರೆಗಳನ್ನು ಕೈಗೊಂಡರು. ‘ಗಿಪ್ಟ್‌ ಆಫ್‌ ಲೈಫ್‌ ಅಡ್ವೆಂಚರ್‌’ ಹೆಸರಿನ ಚಾರಿಟಬಲ್ ಫೌಂಡೇಶನ್ ಮೂಲಕ ಈವರೆಗೆ 43 ದೇಶಗಳನ್ನು ಸುತ್ತಿದ್ದಾರೆ. ಅನಿಲ್‌ ಶ್ರೀವಸ್ತ ಅವರಿಗೆ ಪತ್ನಿ ದೀಪಾಲಿ ಜೊತೆಯಾಗಿದ್ದಾರೆ.  

ಈ ಬಗ್ಗೆ ವಿದೇಶಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಅನಿಲ್‌, ‘ನಾನು ನನ್ನ ಸಹೋದರನಿಗೆ ಏನು ಮಾಡಿದ್ದೇನೋ ಅದಕ್ಕೆ ಪ್ರೀತಿಯೇ ಮೂಲವಾಗಿದೆ. ನನ್ನ ಅಭಿಪ್ರಾಯದಲ್ಲಿ, ಯಾರಾದರೂ ತಮ್ಮ ಅಂಗವನ್ನು ದಾನ ಮಾಡಬೇಕೆಂದರೆ, ಅದಕ್ಕೆ ಪ್ರೀತಿಯೇ ಕಾರಣವಾಗುತ್ತದೆ’ ಎಂದು ಹೇಳಿದ್ದಾರೆ.  

1 ಲಕ್ಷ ಕಿ.ಮೀ ದೂರ ಕ್ರಮಿಸಿರುವ ಅನಿಲ್‌ ದಂಪತಿ ಇಲ್ಲಿಯರೆಗೆ 73 ಸಾವಿರ ಜನರನ್ನು ಭೇಟಿಯಾಗಿ ಅಂಗ ದಾನದ ಬಗ್ಗೆ ಅರಿವು ಮೂಡಿಸಿದ್ದಾರೆ. ಇನ್ನು ಮುಂದೆಯೂ ಇದೇ ಕಾರ್ಯದಲ್ಲಿ ನಿರತರಾಗುವುದಾಗಿ ಹೇಳಿದ್ದಾರೆ.

ಪರ್ಯಟನೆ ವೇಳೆ, ಜನರು ಬೆಚ್ಚಗಿನ ಹಾಸಿಗೆ ಅಥವಾ ಬಿಸಿ ಆಹಾರ ನೀಡದಿದ್ದ ಸಂದರ್ಭದಲ್ಲಿ ತಮ್ಮ ಕಾರಿನಲ್ಲೇ ಮಲಗಿ, ಅಡುಗೆ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಇದು ನಮ್ಮ ಬದುಕನ್ನು ಸಾಹಸಮಯವಾಗಿಸಿತ್ತು ಎಂದು ಅನಿಲ್‌ ಶ್ರೀವಸ್ತ ತಿಳಿಸಿದ್ದಾರೆ. 

ಸಾವಿರಾರು ಶಾಲೆ, ಕಾಲೇಜು, ರೋಟರಿ ಸಂಸ್ಥೆ, ಸಮುದಾಯ ಕೇಂದ್ರ ಮತ್ತು ಕಚೇರಿಗಳನ್ನು ಭೇಟಿ ಮಾಡಿ ಅಂಗಾಂಗ ದಾನದ ಬಗ್ಗೆ ಜನರಲ್ಲಿರುವ ತಪ್ಪು ತಿಳುವಳಿಕೆಯ ಕುರಿತು ಅನಿಲ್‌ ಅರಿವು ಮೂಡಿಸಿದ್ದಾರೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು