ಇಂಡೊನೇಷ್ಯಾದ ಮಳೆಕಾಡುಗಳಿಗೆ ಬಿದ್ದ ಬೆಂಕಿಯಿಂದಾಗಿ ಆಗ್ನೇಯ ಏಷ್ಯಾ ರಾಷ್ಟ್ರಗಳು ನಲುಗಿವೆ. ಮಾಲಿನ್ಯಕಾರಕ ಹಸಿರುಮನೆ ಅನಿಲಗಳಿಂದಾಗಿ ಮಕ್ಕಳು ಉಸಿರಾಟ ಸಂಬಂಧಿ ತೊಂದರೆಗೆ ಸಿಲುಕಿದ್ದಾರೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಿದ್ದು, ವನ್ಯಜೀವಿಗಳು ಸಾವಿಗೀಡಾಗಿವೆ. ಜನಸಾಮಾರಿಗೂ ಬಿಸಿ ತಟ್ಟಿದೆ. ಸಾವಿರಕ್ಕೂ ಹೆಚ್ಚು ಮಂದಿ ‘ವಾಟರ್ ಬಾಂಬಿಂಗ್’ ವಿಮಾನಗಳ ಮೂಲಕ ಬೆಂಕಿ ನಂದಿಸಿದ್ದಾರೆ.

ಕಾರಣ
*2015–2019ರ ಅವಧಿಯಲ್ಲೇ ದಾಖಲೆಯ ಒಣ ಹವೆ ಆಗ್ನೇಯ ಏಷ್ಯಾವನ್ನು ಈ ವರ್ಷದ ಏಪ್ರಿಲ್–ಸೆಪ್ಟೆಂಬರ್‌ನಲ್ಲಿ ಆವರಿಸಿದೆ. ಬೆಂಕಿ ಉಲ್ಬಣಗೊಳ್ಳಲು ಇದೇ ಕಾರಣ ಎನ್ನಲಾಗಿದೆ.

ಪರಿಣಾಮ
*ಮುಖಗವಸುಗಳ ಮೊರೆ ಹೋದ ಸಾರ್ವಜನಿಕರು

*ಉಸಿರಾಟ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಳ

*ದಟ್ಟ ಹೊಂಜಿನಿಂದಾಗಿ ಮಲೇಷ್ಯಾ ಮತ್ತು ಇಂಡೊನೇಷ್ಯಾದಲ್ಲಿ ಬಾಗಿಲು ಮುಚ್ಚಿದ ಶಾಲೆಗಳು. ವಿಮಾನ ಸಂಚಾರದಲ್ಲಿ ವ್ಯತ್ಯಯ.

*ಕೃಷಿ ಭೂಮಿಗಳಿಗೂ ಹರಡಿದ ಅಗ್ನಿಯ ಕೆನ್ನಾಲಿಗೆ. ನಗರಗಳು ಮತ್ತು ಕೃಷಿ ಭೂಮಿಯ ಮೇಲೆ ಆವರಿಸಿದ ಬೂದಿ

ಸಂತ್ರಸ್ತ ದೇಶಗಳು
ಇಂಡೊನೇಷ್ಯಾ, ಮಲೇಷ್ಯಾ, ಸಿಂಗಪುರ, ಫಿಲಿಪ್ಪೀನ್ಸ್ , ವಿಯೆಟ್ನಾಂ, ತಿಮೋರ್, ಥಾಯ್ಲೆಂಡ್, ಪಪುವಾ ನ್ಯೂಗಿನಿ

ಬೆಂಕಿ ಎಲ್ಲೆಲ್ಲಿ?
ಇಂಡೊನೇಷ್ಯಾದ ಸುಮಾತ್ರ ಮತ್ತು ಬೊರ್ನಿಯೊ ದ್ವೀಪಗಳ ಮಳೆಕಾಡುಗಳು

ರೋಗ ನಿರೋಧಕ ಶಕ್ತಿ ಬೆಳವಣಿಗೆ ಹೊಂದಿಲ್ಲದ ಮಕ್ಕಳು ವಾಯು ಮಾಲಿನ್ಯದ ತೊಂದರೆಗೆ ಒಳಗಾಗಿದ್ದಾರೆ. ಗರ್ಭಿಣಿಯರೂ ಮಾಲಿನ್ಯದ ಪರಿ ಣಾಮಕ್ಕೆ ತುತ್ತಾಗಿದ್ದು, ಅವಧಿ ಪೂರ್ವ ಮಕ್ಕಳ ಜನನ ಪ್ರಮಾಣ ಹೆಚ್ಚಿದೆ.
-ದೊಬೇರಾ ಕೊಮಿನಿ, ಇಂಡೊನೇಷ್ಯಾದ ಯುನಿಸೆಫ್ ಪ್ರತಿನಿಧಿ

ಅಂಕಿ ಅಂಶ

1 ಕೋಟಿ:ಉಸಿರಾಟ ತೊಂದರೆಗೆ ಸಿಲುಕಿರುವ ಮಕ್ಕಳ ಸಂಖ್ಯೆ

360ಕೋಟಿ ಟನ್:ಒಂದು ತಿಂಗಳಲ್ಲಿ ಬಿಡುಗಡೆಯಾದ ಹಸಿರು ಮನೆ ಅನಿಲ

760 ಕೋಟಿ ಟನ್:2015ರಿಂದ ಬಿಡುಗಡೆಯಾದ ಹಸಿರು ಮನೆ ಅನಿಲ

1600:ಅಗ್ನಿಕೇಂದ್ರಗಳನ್ನು ಗುರುತಿಸಲಾಗಿದ್ದು, ನಂದಿಸುವ ಕಾರ್ಯಾಚರಣೆ ಆರಂಭಿಸಲಾಗಿದೆ

37:ಬೆಂಕಿ ನಂದಿಸಲು ಬಳಸುತ್ತಿರುವ ಜಲಬಾಂಬ್ ವಿಮಾನಗಳು

3,108ಚ.ಕಿ.ಮೀ:ಬೆಂಕಿಯಿಂದ ನಾಶವಾದ ಅರಣ್ಯ ಭೂಮಿ

ಆಧಾರ: ಎಎಫ್‌ಪಿ, ಪಿಟಿಐ, ಯುನಿಸೆಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.