ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್ ದೇಗುಲದಲ್ಲಿ ‘ಸಾವಿಲ್ಲದ ಬಿಕ್ಕು’: ಅಪ್‌ಡೇಟ್ ಆಗುವ ‘ರೋಬೋ’ದಿಂದ ಪ್ರವಚನ

Last Updated 17 ಆಗಸ್ಟ್ 2019, 9:15 IST
ಅಕ್ಷರ ಗಾತ್ರ

ಕ್ಯೊಟೊ (ಜಪಾನ್‌):ಇಲ್ಲಿನ ಸುಮಾರು 400 ವರ್ಷ ಹಳೆಯದಾದ ಬೌದ್ದ ದೇವಾಲಯ ‘ಕೊಡಜಿ’ಯಲ್ಲಿ ಯಂತ್ರ ಮಾನವನನ್ನು(ರೋಬೋ) ಬಿಕ್ಕುವನ್ನಾಗಿ ನೇಮಿಸಲಾಗಿದ್ದು, ಈ ಸುದ್ದಿ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಆಂಡ್ರಾಯ್ಡ್‌ ಕೆನಾನ್‌ ತಂತ್ರಾಂಶ ಆಧಾರಿತ ಈ ರೋಬೋ, ಕೃತಕ ಬುದ್ಧಿಮತ್ತೆಯನ್ನು ಹೊಂದಿದ್ದು ಇತರ ಬಿಕ್ಕುಗಳಂತೆಯೇ ಕಾರ್ಯ ನಿರ್ವಹಿಸುತ್ತದೆ.

ಕರುಣೆ ಹಾಗೂ ಧರ್ಮೋಪದೇಶವನ್ನು ಬೋಧಿಸುವ ಈ ರೋಬೋಗೆಸಾವಿಲ್ಲ. ತನ್ನಿಂತಾನೆ ಅಪ್‌ಡೇಟ್‌ ಆಗುವ ಇದರ ಜ್ಞಾನನಿತ್ಯ ವರ್ಧಿಸುತ್ತಲೇ ಇರುತ್ತದೆ. ಎಲ್ಲ ರೀತಿಯ ಮಾಹಿತಿಯನ್ನೂ ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವುದೇ ಇದರ ಆಕರ್ಷಣೆ ಎಂದು ಹೇಳುತ್ತಾರೆ ಬಿಕ್ಕು ಟೆನ್ಷೋ ಗೊಟೊ.

ಕೃತಕ ಬುದ್ಧಿಮತ್ತೆಯೊಂದಿಗೆ ತನ್ನ ಜ್ಞಾನದ ವಿಸ್ತಾರವನ್ನು ಹೆಚ್ಚಿಸಿಕೊಳ್ಳುವ ಈ ಬಿಕ್ಕು ಎಂತಹದೇ ಸಮಸ್ಯೆಯಿದ್ದರೂ ಪರಿಹಾರವನ್ನು ಗುರುತಿಸಬಲ್ಲುದು ಎಂಬುದು ಅವರ ಅಭಿಮತ.

ಮಧ್ಯ ವಯಸ್ಕರ ದೇಹದಷ್ಟು ಗಾತ್ರದ ರೋಬೋಈ ವರ್ಷದ ಆರಂಭದಿಂದಲೇ ಕಾರ್ಯ ಆರಂಭಿಸಿದೆ. ಪ್ರಾರ್ಥನೆ ಸಮಯದಲ್ಲಿ ಕೈ ಜೋಡಿಸುವ ಹಾಗೂ ಮೆಲುದನಿಯಲ್ಲಿ ಮಾತನಾಡುವ ಈ ರೋಬೋದ ಸೊಂಟ, ತೋಳು ಹಾಗೂ ತಲೆ ಚಲನಶೀಲವಾಗಿವೆ. ರೋಬೋ ದೇಹ ಮನುಷ್ಯರಂತೆಯೇ ಕಾಣಲಿ ಎಂಬ ಕಾರಣಕ್ಕೆ ಕೈ, ಮುಖ ಹಾಗೂ ಭುಜವನ್ನು ಚರ್ಮ ವರ್ಣದ ಸಿಲಿಕಾನ್‌ನಿಂದ ರಚಿಸಲಾಗಿದೆ. ದೇಹದ ಉಳಿದ ಭಾಗ ಯಂತ್ರದಂತೆಯೇ ಕಾಣುತ್ತದೆ.

ಈ ರೋಬೋ ತಯಾರಿಕೆ ಯೋಜನೆಯನ್ನು ಜೆನ್‌ ದೇವಾಲಯ ಹಾಗೂ ಒಸಾಕ ವಿವಿಯ ಪ್ರಾಧ್ಯಾಪಕ,ಹೆಸರಾಂತ ರೋಬೋಟಿಕ್‌ ತಜ್ಞ ಹಿರೋಶಿ ಇಷಿಗುರೊ ಅವರು ಜಂಟಿಯಾಗಿ ನಿರ್ವಹಿಸಿದ್ದಾರೆ. ಇದಕ್ಕಾಗಿ ಬರೋಬ್ಬರಿ ₹ 7.11 ಕೋಟಿ ವೆಚ್ಚ ಮಾಡಲಾಗಿದೆ. ಯಂತ್ರಮಾನವ ಸಮಾಧಾನ, ಸಂತಸ, ಕೋಪ, ಅಸೂಯೆ ಇನ್ನಿತರ ಭಾವಗಳನ್ನೂ ವ್ಯಕ್ತಪಡಿಸಬಲ್ಲ. ಮಾತ್ರವಲ್ಲದೇ,ಬೋಧನಾ ಕಾರ್ಯವನ್ನು ಸರಾಗವಾಗಿ ನಡೆಸುವಂತೆವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಈ ಯಂತ್ರ ಬಿಕ್ಕು, ಯುವ ಸಮೂಹವನ್ನೂ ತಲುಪಲಿದ್ದಾನೆ ಎಂದು ಗೊಟೊ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಈ ಬಿಕ್ಕುವಿನಕಾರ್ಯವಿಧಾನವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿರುವ ಬಹಳಷ್ಟು ಮಂದಿ,‘ಇದು ಮನುಷ್ಯರಂತೆ ಕಾಣಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ. ಪಾಶ್ಚಾತ್ಯರಲ್ಲಿ ಬಹುತೇಕರು ಈ ರೋಬೋ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ‘ರೋಬೋವನ್ನು ಒಪ್ಪದಿರಲು ಪಾಶ್ಚಾತ್ಯರ ಮೇಲೆ ಬೈಬಲ್‌ನ ಪ್ರಭಾವ ಇದ್ದಿರಬಹುದು. ಆದರೆ, ಅವರು 19ನೇ ಶತಮಾನದ ಇಂಗ್ಲಿಷ್‌ ಕಾದಂಬರಿಗಾರ್ತಿ ಮೇರಿ ಶೆಲ್ಲಿಫ್ರಾಂಕೆನ್‌ಸ್ಟೇನ್‌ನಲ್ಲಿ ಬರುವ ದೈತ್ಯರೂಪಿಗೆ (ಪಾತ್ರಕ್ಕೆ) ಇದನ್ನು ಹೋಲಿಸುತ್ತಾರೆ’

ಯಂತ್ರದ ಬಗ್ಗೆ ಜಪಾನಿಯರಿಂದಲೂಧನಾತ್ಮಕಪ್ರತಿಕ್ರಿಯಿ ವ್ಯಕ್ತವಾಗಿಲ್ಲ. ‘ಜಪಾನಿಯರು ರೋಬೋ ಬಿಕ್ಕುವಿನ ಬಗ್ಗೆ ಪೂರ್ವಾಗ್ರಹದಿಂದ ಪ್ರತಿಕ್ರಿಯಿಸಿಲ್ಲ. ಏಕೆಂದರೆ ನಾವು ಈಗಾಗಲೇ ರೋಬೋಗಳ ಜೊತೆ ಒಡನಾಡುತ್ತಿದ್ದೇವೆ’ ಎನ್ನುತ್ತಾರೆ ಗೊಟೊ.

ಅಲ್ಲದೇ, ‘ಹೌದು. ಈ ರೋಬೋಆತ್ಮವನ್ನು ಹೊಂದಿಲ್ಲ. ಆದರೆ, ಬೌದ್ಧರ ನಂಬಿಕೆ ಇರುವುದುದೇವರಲ್ಲಿ ಮಾತ್ರವಲ್ಲ. ಬುದ್ಧನ ಮಾರ್ಗವನ್ನು ಅನುಸರಿಸುವುದರಲ್ಲಿ. ಹಾಗಾಗಿ ಅದನ್ನು ಪ್ರತಿಪಾದಿಸುತ್ತಿರುವುದು ಮನುಷ್ಯನೇ?ಮರವೇ? ಯಂತ್ರವೇ? ಲೋಹದ ತುಂಡೇ? ಎಂಬುದು ಮುಖ್ಯವಾಗದು’ ಎಂದು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT