ಬುಧವಾರ, ಫೆಬ್ರವರಿ 1, 2023
26 °C
ಕತಾರ್‌ ಕರ್ನಾಟಕ ಸಂಘದಿಂದ ಪ್ರಯಾಣಕ್ಕೆ ನೆರವು

ಕತಾರ್‌ನಿಂದ ಬಂದರು ಕನ್ನಡಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕತಾರ್‌ನಿಂದ ಎರಡನೇ ವಿಮಾನದಲ್ಲಿ ಆರು ಶಿಶುಗಳು ಸೇರಿ 180 ಜನ ತವರು ನಾಡಿಗೆ ಬಂದಿಳಿದಿದ್ದಾರೆ.

ದೋಹಾದ ಹಮದ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೋ ಮವಾರ ಬೆಳಿಗ್ಗೆ 11.45ಕ್ಕೆ ಹೊರಟ ವಿಮಾನ (ಚಾರ್ಟರ್ಡ್‌ ಫ್ಲೈಟ್‌) ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ ಬಂದಿಳಿಯಿತು.

’ಗೋ ಏರ್’ ಸಂಸ್ಥೆಯ ವಿಮಾನವನ್ನು ಬಾಡಿಗೆಗೆ ಪಡೆದ ಕತಾರ್ ಕರ್ನಾಟಕ ಸಂಘವು, ಕತಾರಿನ ಇತರೆ ಕರ್ನಾಟಕ ಮೂಲದ ಸಂಸ್ಥೆಗಳ ಸಹಕಾರದಲ್ಲಿ ಈ ವ್ಯವಸ್ಥೆ ಮಾಡಿತ್ತು.

ಅಲ್ಲಿ ಸಂಕಷ್ಟದಲ್ಲಿ ಇದ್ದವರನ್ನು ರಾಜ್ಯಕ್ಕೆ ಕರೆತರಲು ಕತಾರ್‌ನಲ್ಲಿರುವ ಕನ್ನಡ ಸಂಘ ಹಾಗೂ ಇಂಡಿಯನ್‌ ಕಮ್ಯುನಿಟಿ ಬೆನೆವೊಲೆಂಟ್‌ ಫೋರಂ (ಐಸಿಬಿಎಫ್‌) ಜಂಟಿಯಾಗಿ ಈ ವಿಶೇಷ ಖಾಸಗಿ ವಿಮಾನ ವ್ಯವಸ್ಥೆ ಮಾಡಿದ್ದವು.

ಕತಾರ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಡಿ ಕೆಲಸ ಮಾಡುವ ಐಸಿಬಿಎಫ್‌ನ ಜಂಟಿ ಕಾರ್ಯದರ್ಶಿ ಸುಬ್ರಮಣ್ಯ ಹೆಬ್ಬಾಗಿಲು, ಉಪಾಧ್ಯಕ್ಷ ಮಹೇಶ್‌ಗೌಡ, ಕತಾರ್ ಕರ್ನಾಟಕ  ಸಂಘದ  ನಾಗೇಶ್‌ ರಾವ್‌, ರಾಯಭಾರ ಕಚೇರಿ, ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡು ವಿಮಾನದ ವ್ಯವಸ್ಥೆಯಾಗಲು ಶ್ರಮಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು