ಶನಿವಾರ, ಮೇ 30, 2020
27 °C

ವಾಷಿಂಗ್ಟನ್‌ | ನೆರೆಗೆ ಒಡೆದ ಎರಡು ಅಣೆಕಟ್ಟು: ಸಾವಿರಾರು ಜನರ ಸ್ಥಳಾಂತರ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರಿ ಮಳೆಯಿಂದಾಗಿ ಬುಧವಾರ ಮಿಷಿಗನ್‌ನಲ್ಲಿ ಎರಡು ಅಣೆಕಟ್ಟುಗಳು ಒಡೆದು ಭಾರಿ ಪ್ರವಾಹ ಉಂಟಾಗಿದ್ದು, ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. 

ಈಡನ್‌ವಿಲ್‌ ಹಾಗೂ ಸ್ಯಾನ್ಫರ್ಡ್‌ ಅಣೆಕಟ್ಟೆಗಳ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಗವರ್ನರ್‌ ಗ್ರೆಚೆನ್‌ ವಿಟ್ಮೆರ್‌ ಘೋಷಿಸಿದ್ದಾರೆ. ‘‌ಈ ಪ್ರದೇಶಗಳ ನಿವಾಸಿಗಳಿಗೆ ತಕ್ಷಣವೇ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ’ ಎಂದು ವಿಟ್ಮೆರ್‌ ತಿಳಿಸಿದರು.   

9 ಅಡಿ ನೀರು: ‘ಮಿಡ್‌ಲ್ಯಾಂಡ್‌ನಲ್ಲಿ ಅಂದಾಜು 42 ಸಾವಿರ ಜನರು ವಾಸಿಸುತ್ತಿದ್ದು, ಈ ಪ್ರದೇಶ ಮುಳುಗಡೆಯಾಗುವ ಸಾಧ್ಯತೆ ಇದೆ. ಇಲ್ಲಿ 9 ಅಡಿ ಎತ್ತರದವರೆಗೆ ನೀರು ತುಂಬಿರಲಿದೆ. ಹಿಂದೆದೂ ಇಂಥ ನೆರೆ ಸಂಭವಿಸಿರಲಿಲ್ಲ’ ಎಂದು ಅವರು‌ ಹೇಳಿದರು. ಡಿಟ್ರಾಯ್ಟ್‌ ಫ್ರೀ ಪ್ರೆಸ್‌ ಮಾಹಿತಿಯಂತೆ ನೆರೆಯಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು