ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಉತ್ಪನ್ನಗಳ ಆಮದು ಶುಲ್ಕ ಹೆಚ್ಚಳ? ಡೊನಾಲ್ಡ್ ಟ್ರಂಪ್‌ ಇಂಗಿತ

63 ಸಾವಿರ ದಾಟಿದ ಸಾವಿನ ಸಂಖ್ಯೆ
Last Updated 1 ಮೇ 2020, 22:46 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದಲ್ಲಿ ‘ಕೋವಿಡ್‌–19’ರ ಸಾವಿನ ಸರಣಿ ಮುಂದುವರಿದಿದ್ದು, ಮೂರನೇ ದಿನವೂ ಸತತವಾಗಿ 2 ಸಾವಿರಕ್ಕೂ ಅಧಿಕ ಜನರು ಸತ್ತಿದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 2,053 ಜನ ಸತ್ತಿದ್ದರೆ, ಬುಧವಾರ 2,502, ಮಂಗಳವಾರ 2,207 ಜನ ಸತ್ತಿದ್ದರು. ಇದರೊಂದಿಗೆ ಅಮೆರಿಕದಲ್ಲಿ ಕೋವಿಡ್‌ನಿಂದ ಸತ್ತವರ ಸಂಖ್ಯೆ 63 ಸಾವಿರ ದಾಟಿದೆ.

ಈ ಮಧ್ಯೆ, ಟ್ರಂಪ್‌ ಅವರು ಚೀನಾ ಉತ್ಪನ್ನಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿಆಮದು ಶುಲ್ಕ ವಿಧಿಸುವ ಸುಳಿವು ನೀಡಿದ್ದಾರೆ. ಆದರೆ, ಆ ದೇಶದ ಮೇಲೆ ದಂಡ ಪ್ರಯೋಗದ ಕ್ರಮವಾಗಿ ಸಾಲ ರದ್ದುಪಡಿಸುವ ಸಾಧ್ಯತೆಯನ್ನು ಅವರು ಅಲ್ಲಗಳೆದಿದ್ದಾರೆ.

‘ಸಾಲ ರದ್ದುಪಡಿಸುವುದು ಒಳ್ಳೆಯ ನಡೆಯಲ್ಲ. ಇದು, ದೇಶದ ಕರೆನ್ಸಿ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಬದಲಿಗೆ ಆಮದು ಶುಲ್ಕ ಹೆಚ್ಚಿಸುವುದೂ ಸೇರಿದಂತೆ ಅನ್ಯ ಮಾರ್ಗಗಳಿವೆ’ ಎಂದು ಟ್ರಂಪ್‌ ಪ್ರತಿಪಾದಿಸಿದ್ದಾರೆ.

‘ನಾವು ಡಾಲರ್‌ನ ಮೌಲ್ಯ, ಪ್ರಾಮುಖ್ಯತೆಯನ್ನೂ ರಕ್ಷಿಸಬೇಕಿದೆ. ಡಾಲರ್ ವಿಶ್ವದ ಅತ್ಯುತ್ತಮ ಮತ್ತು ದೃಢ ಕರೆನ್ಸಿ. ಇದೇ ಕಾರಣಕ್ಕಾಗಿ ನಮಗೆ ಶೂನ್ಯ ಬಡ್ಡಿದರದಲ್ಲಿ ಆರ್ಥಿಕ ನೆರವು ಸಿಗುತ್ತಿದೆ’ ಎಂದು ಟ್ರಂಪ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT