ಸೋಮವಾರ, ಏಪ್ರಿಲ್ 12, 2021
29 °C

ಭಾರತಕ್ಕೆ ನ್ಯಾಟೊ ಮಿತ್ರ ದೇಶ ಸ್ಥಾನಮಾನ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಭಾರತಕ್ಕೆ ‘ನ್ಯಾಟೊ’ ಮಿತ್ರ ದೇಶ ಸ್ಥಾನಮಾನ ನೀಡುವ ಮಸೂದೆಗೆ ಅಮೆರಿಕ ಸಂಸತ್‌ ಅಂಗೀಕಾರ ನೀಡಿದೆ.

ರಾಷ್ಟ್ರೀಯ ರಕ್ಷಣಾ ದೃಢೀಕರಣ ಕಾಯ್ದೆ (ಎನ್‌ಡಿಎಎ) ಅಡಿ ಈ ಮಸೂದೆಯನ್ನು ಮಂಡಿಸಲಾಗಿತ್ತು. ಅಮೆರಿಕದ ಮಿತ್ರದೇಶಗಳಾದ ಇಸ್ರೇಲ್‌ ಹಾಗೂ ದಕ್ಷಿಣ ಕೊರಿಯಾಕ್ಕೆ ಸಮಾನವಾಗಿ ಭಾರತವೂ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ನೆರವು ಪಡೆಯಲು ಇದರಿಂದ ಸಾಧ್ಯವಾಗಲಿದೆ. 

ಅದರಲ್ಲೂ, ಹಿಂದೂ ಮಹಾಸಾಗರದಲ್ಲಿ ನಡೆಯುವ ಸೇನಾ ಕಾರ್ಯಾಚರಣೆಯಲ್ಲಿ ಸಹಕಾರ, ಭಯೋತ್ಪಾದನೆ, ಕಳ್ಳತನ ವಿರುದ್ಧದ ಹೋರಾಟದಲ್ಲಿ ನೆರವು ಹಾಗೂ ಸಾಗರ ಗಡಿ ರಕ್ಷಣೆಗೂ ಅಮೆರಿಕದಿಂದ ಸಹಕಾರ ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ.  

ಈ ಮಸೂದೆಗೆ ಅಂಗೀಕಾರ ಪಡೆಯುವಲ್ಲಿ ಸೆನೆಟರ್‌ಗಳಾದ ಕಾರ್ನಿನ್‌ ಹಾಗೂ ವಾರ್ನರ್‌ ಅವರು ಸಾಕಷ್ಟು ಶ್ರಮಿಸಿದ್ದಾರೆ ಎಂದು ಹಿಂದೂ ಅಮೆರಿಕಲ್‌ ಫೌಂಡೇಷನ್‌ನ ವ್ಯವಸ್ಥಾಪಕ ನಿರ್ದೇಶಕ ಸಮೀರ್‌ ಕಲ್ರಾ ಹೇಳಿದ್ದಾರೆ.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು