ಗುರುವಾರ , ಡಿಸೆಂಬರ್ 3, 2020
19 °C

ಗಡಿ ಠಾಣೆ ಸಮೀಪ ಸೇನೆ ನಿಯೋಜನೆ: ಉತ್ತರ ಕೊರಿಯಾ

ಎಪಿ Updated:

ಅಕ್ಷರ ಗಾತ್ರ : | |

ಉತ್ತರ ಕೊರಿಯಾ–ದಕ್ಷಿಣ ಕೊರಿಯಾ ಗಡಿ ಪ್ರದೇಶ–ಸಂಗ್ರಹ ಚಿತ್ರ

ಸೋಲ್: ಧ್ವಂಸಗೊಂಡಿರುವ ಅಂತರ್ ಕೊರಿಯಾ ಸಂಪರ್ಕ ಕಚೇರಿ ಇದ್ದ ಸ್ಥಳದಲ್ಲಿ ಗಡಿ ಠಾಣೆಯನ್ನು ಮರು ನಿರ್ಮಿಸಿ, ಅಲ್ಲಿಗೆ ಸೇನೆಯನ್ನು ಕಳುಹಿಸುವುದಾಗಿ ಉತ್ತರ ಕೊರಿಯಾ ಬುಧವಾರ ಹೇಳಿದೆ. ಮುಂಚೂಣಿ ಜಾಗಗಳಲ್ಲಿ ಸೇನಾ ಕಸರತ್ತು ನಡೆಸುವುದಾಗಿಯೂ ಘೋಷಿಸಿದೆ. 

ಪರಮಾಣು ಮಾತುಕತೆ ಮುರಿದು ಬಿದ್ದಿದ್ದು, ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಮೇಲೆ ಒತ್ತಡ ಹೇರುವ ಹೊಸ ತಂತ್ರಗಳನ್ನು ಉತ್ತರ ಕೊರಿಯಾ ಮುಂದುವರಿಸಿದೆ ಎಂದು ತಜ್ಞರು ಈ ಬೆಳವಣಿಗೆಯನ್ನು ವಿಶ್ಲೇಷಿಸಿದ್ದಾರೆ. ಮಂಗಳವಾರವಷ್ಟೇ ಸಂಪರ್ಕ ಕಚೇರಿಯನ್ನು ಉತ್ತರ ಕೊರಿಯಾ ನಾಶಗೊಳಿಸಿತ್ತು.

ಉತ್ತರ ಕೊರಿಯಾದ ಈ ಕ್ರಮಗಳು ರಕ್ತಪಾತ ಅಥವಾ ಘರ್ಷಣೆಗೆ ಈಡು ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. 

ಉಭಯ ದೇಶಗಳ ಗಡಿಯಲ್ಲಿರುವ ಡೈಮಂಡ್ ಮೌಂಟೇನ್ ರೆಸಾರ್ಟ್ ಮತ್ತು ಕೊಯಿಸಂಗ್ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್ ಪ್ರದೇಶಗಳಿಗೆ ಸೇನೆ ಕಳುಹಿಸುವುದಾಗಿ ಉತ್ತರ ಕೊರಿಯಾ ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು