ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದ ಭಗ್ನಾವಶೇಷಗಳಿದ್ದರೆ ಹಸ್ತಾಂತರಿಸಿ: ಜನರಿಗೆ ಪಾಕ್ ತನಿಖಾ ತಂಡದ ಮನವಿ

Last Updated 28 ಮೇ 2020, 8:57 IST
ಅಕ್ಷರ ಗಾತ್ರ

ಕರಾಚಿ (ಪಾಕಿಸ್ತಾನ):‘ದುರಂತಕ್ಕೀಡಾದ ವಿಮಾನದ ಅವಶೇಷಗಳನ್ನೇನಾದರೂ ನಾಗರಿಕರು ಇಟ್ಟುಕೊಂಡಿದ್ದರೆ ಹಸ್ತಾಂತರಿಸಿ,’ ಎಂದು ಪಾಕಿಸ್ತಾನ ವಿಮಾನ ಅಪಘಾತದ ತನಿಖಾಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.

ಕಳೆದ ಶುಕ್ರವಾರ ಪಾಕಿಸ್ತಾನದ ವಿಮಾನವು ಕರಾಚಿಯ ಜನವಸತಿ ಪ್ರದೇಶದಲ್ಲಿ ಪತನಗೊಂಡಿತ್ತು. ಈ ದುರಂತದಲ್ಲಿ 97 ಮಂದಿ ಮೃತಪಟ್ಟಿದ್ದರು.

ವಿಮಾನ ಅಪಘಾತ ಹೇಗೆ ಸಂಭವಿಸಿತು ಎಂಬುದರ ತನಿಖೆ ಕೈಗೊಂಡಿರುವ ಅಲ್ಲಿನ ಅಧಿಕಾರಿಗಳು, ಕಾಕ್‌ಪಿಟ್‌ ವಾಯ್ಸ್ ರೆಕಾರ್ಡರ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಅದು ಈ ವರೆಗೆ ಪತ್ತೆಯಾಗಿಲ್ಲ. ಹೀಗಾಗಿ ಯಾವುದೇ ಅವಶೇಷಗಳನ್ನು ನಾಗರಿಕರು ತಮ್ಮ ಬಳಿ ಇಟ್ಟುಕೊಂಡಿದ್ದರೆ ಕೂಡಲೇ ಹಸ್ತಾಂತರ ಮಾಡುವಂತೆ ತನಿಖಾಧಿಕಾರಿಗಳು ವಿನಂತಿ ಮಾಡುತ್ತಿದ್ದಾರೆ.

‘ವಿಮಾನ ಜನವಸತಿ ಪ್ರದೇಶದ ಮೇಲೆ ಬಿದ್ದಿದೆ. ಈ ವೇಳೆ ಜನ ಅದರ ಭಗ್ನಾವಶೇಷಗಳನ್ನು ತೆಗೆದುಕೊಂಡಿರುವ ಸಾಧ್ಯತೆಗಳಿರುತ್ತವೆ,’ ಎಂದು ವಿಮಾನವನ್ನು ನಿರ್ವಹಿಸುತ್ತಿದ್ದ ಪಾಕಿಸ್ತಾನ ಇಂಟರ್‌ ನ್ಯಾಷನಲ್‌ ಏರ್‌ಲೈನ್ಸ್‌ ಕಾರ್ಪೊರೇಷನ್‌ ವಕ್ತಾರರು ತಿಳಿಸಿದ್ದಾರೆ.

ವಿಮಾನ ಜನವಸತಿ ಪ್ರದೇಶಗಳ ಮೇಲೆ ಏಕೆ ಮತ್ತು ಹೇಗೆ ಬಿತ್ತು ಎಂಬುದನ್ನು ಪತ್ತೆ ಹಚ್ಚುವಲ್ಲಿ ಕಾಕ್‌ಪಿಟ್‌ ಹಾಗೂಪೈಲಟ್‌ಗಳ ನಡುವಿನ ಸಂಭಾಷಣೆಯು ಪ್ರಧಾನ ಪಾತ್ರ ವಹಿಸುತ್ತದೆ. ಆದ್ದರಿಂದ ಅಧಿಕಾರಿಗಳು ರೆಕಾರ್ಡರ್‌ನ ಹುಡುಕಾಟದಲ್ಲಿ ತೊಡಗಿದ್ದಾರೆ.

ವಿಮಾನದ ದತ್ತಾಂಶ ಸಂಗ್ರಹ ಈಗಾಗಲೇ ಸಿಕ್ಕಿದೆ. ಆದರೆ, ಕಾಕ್‌ಪಿಟ್‌ ಸಂಭಾಷಣೆ ಈ ವರೆಗೆ ಸಿಕ್ಕಿಲ್ಲ.

ಕರಾಚಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಲು ಬಂದ ಪೈಲಟ್‌ಗಳು ವಿಮಾನದ ಎತ್ತರ ಮತ್ತು ವೇಗದ ಬಗ್ಗೆ ಏರ್‌ ಟ್ರಾಫಿಕ್‌ ಕಂಟ್ರೊಲ್ ಪದೇ ಪದೆ ನೀಡಿದ ಎಚ್ಚರಿಕೆಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಅಲ್ಲದೆ, ಲ್ಯಾಂಡಿಂಗ್ ಗೇರ್‌ ಬಳಸದೇ ವಿಮಾನ ಇಳಿಸಲು ಪ್ರಯತ್ನಿಸಿದ್ದರು ಎಂದು ಪಾಕಿಸ್ತಾನದ ‘ದಿ ನ್ಯೂಸ್’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT