ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಪ್ರತಿಭಟನಕಾರರ ಆಕ್ರೋಶಕ್ಕೆ ಪ್ರತಿಮೆ ಧ್ವಂಸ

Last Updated 20 ಜೂನ್ 2020, 10:15 IST
ಅಕ್ಷರ ಗಾತ್ರ

ವಾಷಿಂಗ್ಟನ್: ಜಾರ್ಜ್ ಫ್ಲಾಯ್ಡ್ ಸಾವಿನಿಂದ ಆಕ್ರೋಶಗೊಂಡಿರುವ ಜನರು ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಕಾನ್ಫೆಡರೇಟ್ ಜನರಲ್ಅಲ್ಬರ್ಟ್ ಪೈಕ್ ಪ್ರತಿಮೆಯನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದ್ದಾರೆ.

11 ಅಡಿ ಎತ್ತರವಿರುವ ಪ್ರತಿಮೆಯ ಸ್ಥಳಕ್ಕೆ ನುಗ್ಗಿದ ಪ್ರತಿಭಟನಕಾರರು, ಚೈನ್ ಬಳಸಿ ಅಲ್ಬರ್ಟ್ ಪೈಕ್ ಅವರ ಪ್ರತಿಮೆಯನ್ನು ನೆಲಕ್ಕುರುಳಿಸಿದರು. ಪ್ರತಿಮೆಗೆ ಬೆಂಕಿ ಹಚ್ಚಿ, ಅದರ ಸುತ್ತಲೂ ಜಮಾಯಿಸಿದರು. ‘ನ್ಯಾಯ ಇಲ್ಲ. ಶಾಂತಿಯೂ ಇಲ್ಲ’ ಎಂಬ ಘೋಷಣೆ ಕೂಗಿದರು. ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಘಟನಾ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಕಾರರನ್ನು ತಡೆಯಲು ಮುಂದಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಪೊಲೀಸರು ಮೌನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಂಡಿಸಿದ್ದಾರೆ.

1861–65ರ ಅವಧಿಯಲ್ಲಿ ಅಮೆರಿಕದ ದಕ್ಷಿಣ ಭಾಗದ ಸೈನ್ಯದ ಮುಖ್ಯಸ್ಥರನ್ನು ಕಾನ್ಫಡರೇಟ್‌ ಜನರಲ್‌ ಎಂಬುದಾಗಿ ಕರೆಯಲಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT