ಶನಿವಾರ, ಡಿಸೆಂಬರ್ 7, 2019
25 °C

ಪರಿಸರ ಹೋರಾಟಗಾರ್ತಿ ಗ್ರೆಟಾ ಕುರಿತು ಟ್ರಂಪ್ ಮಾಡಿದ ಟ್ವೀಟ್‌ಗೆ ಭಾರಿ ಟೀಕೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌: ಸ್ವೀಡನ್‌ನ ಪರಿಸರ ಹೋರಾಟಗಾರ್ತಿ, 16 ವರ್ಷದ ಗ್ರೆಟಾ ಟನ್‌ಬರ್ಗ್ ಕುರಿತಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಾಡಿರುವ ಟ್ವೀಟ್‌ ಭಾರಿ ಟೀಕೆಗೆ ಒಳಗಾಗಿದೆ.

‘ಅತ್ಯಂತ ಉಜ್ವಲ ಮತ್ತು ಅಭೂತಪೂರ್ವ ಭವಿಷ್ಯವನ್ನು ಎದುರುನೋಡುತ್ತಿರುವ ಅತ್ಯಂತ ಸಂತುಷ್ಟ ಬಾಲಕಿಯಂತೆ ನನಗೆ ಭಾಸವಾಗುತ್ತದೆ. ಇದನ್ನು ನೋಡಲು ಸಂತಸವಾಗುತ್ತದೆ’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ. ಹವಾಮಾನ ಶೃಂಗಸಭೆಯಲ್ಲಿ ಗ್ರೆಟಾ ಮಾಡಿದ್ದ ಭಾಷಣದ ವಿಡಿಯೊವನ್ನೂ ಟ್ರಂಪ್ ಟ್ವೀಟ್ ಮಾಡಿದ್ದರು.

ಇದಕ್ಕೆ ಟ್ವಿಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಬಾಲಕಿಯನ್ನು ಗುರಿಯಾಗಿಸಿಕೊಂಡು ಟ್ರಂಪ್ ಟೀಕೆ ಮಾಡಬಾರದಿತ್ತು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ವಿಶ್ವನಾಯಕರು ಬರೀ ಮಾತನಾಡುತ್ತಾರೆ ಅಷ್ಟೆ. ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ತಡೆಯಲು ಜಾಗತಿಕ ನಾಯಕರೇ, ನೀವು ವಿಫಲರಾಗಿದ್ದೀರಿ. ನಿಮಗೆಷ್ಟು ಧೈರ್ಯ’ ಎಂದು ಗ್ರೆಟಾ ಆಕ್ರೋಶ ವ್ಯಕ್ತಪಡಿಸಿದ್ದರು.

ಧಾರ್ಮಿಕ ಸ್ವಾತಂತ್ರ್ಯ ಮುಖ್ಯ
‘ಈಗ ಹವಾಮಾನ ವೈಪರೀತ್ಯ ನಿಯಂತ್ರಣಕ್ಕಿಂತ ಧಾರ್ಮಿಕ ಸ್ವಾತಂತ್ರ್ಯದ ವಿಚಾರದ ಚರ್ಚೆಗೆ ಆದ್ಯತೆ ನೀಡಬೇಕಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.

‘ವಿಶ್ವದ ಹಲವೆಡೆ ಜನರಿಗೆ ಧಾರ್ಮಿಕ ಸ್ವಾತಂತ್ರ್ಯ ಇಲ್ಲ. ಹಲವು ದೇಶಗಳಲ್ಲಿ ಕೆಲವು ಧರ್ಮದ ಜನರನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡಲಾಗುತ್ತಿದೆ. ಕೆಲವೆಡೆ ಕೆಲವು ಧರ್ಮಗಳನ್ನೇ ನಿಷೇಧಿಸಲಾಗಿದೆ. ಹೀಗಾಗಿ ಈ ವಿಚಾರದ ಬಗ್ಗೆ ಚರ್ಚೆ ನಡೆಯಬೇಕು’ ಎಂದು ಅವರು ಪ್ರತಿ‍ಪಾದಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು