ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ 19: ಅಮೆರಿಕದಲ್ಲಿ 1000 ದಾಟಿದ ಸಾವಿನ ಸಂಖ್ಯೆ

Last Updated 26 ಮಾರ್ಚ್ 2020, 14:47 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದಲ್ಲಿ ಕೋವಿಡ್-19 ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 1000 ದಾಟಿದೆ. ಕೋವಿಡ್ 19 ಸೋಂಕಿನಿಂದಾಗಿ ಅಮೆರಿಕದಲ್ಲಿ ಮೊದಲ ಸಾವು ಸಂಭವಿಸಿದ್ದು ಫೆ.29ರಂದು. ಆನಂತರ ಎರಡು ವಾರಗಳಲ್ಲಿ ಸೋಂಕು ವ್ಯಾಪಕವಾಗಿ ಹರಡಿದ್ದು, ಸೋಂಕು ನಿಯಂತ್ರಣಕ್ಕಾಗಿ ಇಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ವರ್ಲ್ಡೊ ಮೀಟರ್ ಪ್ರಕಾರ ಇಲ್ಲಿಯವರೆಗೆ 1036 ಮಂದಿ ಸತ್ತಿದ್ದಾರೆ. ಮಂಗಳವಾರ ಸಾವಿನ ಸಂಖ್ಯೆ 600 ಇದ್ದಿದ್ದು ಬುಧವಾರ 900ಕ್ಕೆ ತಲುಪಿತ್ತು.

ಕೋವಿಡ್-19 ಹರಡುವುದನ್ನು ತಡೆಯಲು ಜನರು ಮನೆಯಲ್ಲೇ ಇರಿ ಎಂದು ಆದೇಶಿಸಿದ್ದರೂ, ಸೋಂಕು ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT