ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಹಿಂಡಲಗಾ ಜೈಲು, ಬಾಲಕಿಯರ ಹಾಸ್ಟೆಲ್‌ಗೂ ವ್ಯಾಪಿಸಿದ ಕೊರೊನಾ

600ರ ಗಡಿ ದಾಟಿದ ಸೋಂಕು
Last Updated 15 ಜುಲೈ 2020, 18:07 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದ 11 ಮಂದಿ ಕೈದಿಗಳು ಹಾಗೂ ಸದಾಶಿವನಗರ ಬಾಲಕಿಯರ ವಿದ್ಯಾರ್ಥಿನಿಲಯದ ನಾಲ್ವರು ಸೇರಿದಂತೆ ಜಿಲ್ಲೆಯ 41 ಮಂದಿಗೆ ಬುಧವಾರ ಕೋವಿಡ್–19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಇಲ್ಲಿನ ಸೋಂಕಿತರ ಸಂಖ್ಯೆ 604ಕ್ಕೆ ಏರಿಕೆಯಾಗಿದೆ.

ವಂಟಮುರಿ ಕಾಲೊನಿಯ ಇಬ್ಬರು ಬಾಲಕರು ಹಾಗೂ ಬಾಲಕಿಗೆ ಸೋಂಕು ತಗುಲಿದೆ.

ಸೋಂಕು ಕಾಣಿಸಿಕೊಂಡಿರುವುದರಿಂದಾಗಿ ಜೈಲಿನ ಕೈದಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆತಂಕ ಉಂಟಾಗಿದೆ. ಹಾಸ್ಟೆಲ್‌ನಲ್ಲಿ ಇದ್ದವರಿಗೆ ಸೋಂಕು ದೃಢವಾಗುತ್ತಿದ್ದಂತೆಯೇ ಆತಂಕಗೊಂಡ ವಿದ್ಯಾರ್ಥಿನಿಯರು ಕಾರುಗಳನ್ನು ಮಾಡಿಕೊಂಡು ತಮ್ಮ ಊರುಗಳಿಗೆ ತೆರಳುತ್ತಿದ್ದುದು ಕಂಡು ಬಂತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ, ನಗರದ ಮಾಳಿ ಗಲ್ಲಿಯ ಮಹಿಳೆ, ಅಂಬೇಡ್ಕರ್‌ ಗಲ್ಲಿಯ ಪುರುಷ, ಅನಗೋಳ, ಶಾಂತಿನಗರ, ಅಂಬೇಡ್ಕರ್‌ ನಗರ, ಮಜಗಾವಿ, ತಲಾ ಒಬ್ಬರು, ಅಥಣಿಯ ಮೂವರು, ಕಾಗವಾಡ ಜುಗುಳದ ಒಬ್ಬರು, ನಿಪ್ಪಾಣಿ, ಗೋಕಾಕದ ದುರದುಂಡಿಯ ತಲಾ ಒಬ್ಬರು, ವಂಟಮೂರಿ ಕಾಲೊನಿಯ ಐವರು, ರಾಯಬಾಗ ತಾಲ್ಲೂಕು ಕುಡಚಿಯ ಮುಜಾವರ ಗಲ್ಲಿಯ ನಾಲ್ವರು ಹಾಗೂ ಪೊಲೀಸ್ ಠಾಣೆ ಸಮೀಪದ ವ್ಯಕ್ತಿ, ಸವದತ್ತಿಯ ಗಡೇಕರ್‌ ಓಣಿಯ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇವರಲ್ಲಿ ಬಹುತೇಕರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಲಾಗಿದೆ. ಕೆಲವರಿಗೆ ಐಎಲ್‌ಐ (ಶೀತ ಜ್ವರ ಮಾದರಿ) ಸಮಸ್ಯೆ ಇದೆ. ಎಲ್ಲರನ್ನೂ ಚಿಕಿತ್ಸೆಗಾಗಿ ಬಿಮ್ಸ್‌ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. 9 ಮಂದಿ ತೀವ್ರ ನಿಗಾ ಘಟಕ (ಐಸಿಯು)ದಲ್ಲಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಕೋವಿಡ್–19ನಿಂದ ಬಳಲುತ್ತಿದ್ದ ಮೂವರು ಮೃತರಾಗಿದ್ದಾರೆ ಎಂದು ಬುಧವಾರ ಬೆಳಿಗ್ಗೆಯಿಂದಲೂ ಹೇಳಲಾಗುತ್ತಿತ್ತು. ಆದರೆ, ಇಲಾಖೆಯಿಂದ ಬಿಡುಗಡೆಯಾದ ಅಧಿಕೃತ ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT