ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಹೆಚ್ಚಾದ ಪರೀಕ್ಷೆ, ಪ್ರಕರಣ ಕಡಿಮೆ

Last Updated 20 ಜುಲೈ 2020, 20:22 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಪತ್ತೆ ಪರೀಕ್ಷೆಯ ಸಂಖ್ಯೆ ಹೆಚ್ಚಳವಾಗಿದ್ದರೂ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ.

ಭಾನುವಾರ 4,120 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದವು. ಸೋಮವಾರ ಈ ಸಂಖ್ಯೆ 3,648ಕ್ಕೆ ಇಳಿದಿದೆ. ಈ ಪೈಕಿ, ಸುಮಾರು ಅರ್ಧದಷ್ಟು ಪ್ರಕರಣಗಳು ಬೆಂಗಳೂರಿನಲ್ಲಿ ದೃಢಪಟ್ಟಿವೆ. ರಾಜಧಾನಿಯಲ್ಲಿ ಪ್ರತಿದಿನ ಎರಡು ಸಾವಿರಕ್ಕಿಂತ ಹೆಚ್ಚಾಗಲು ಆರಂಭಿಸಿದ್ದ ಪ್ರಕರಣಗಳ ಸಂಖ್ಯೆ ಏಕಾಏಕಿ 1,452ಕ್ಕೆ ಇಳಿದಿದೆ.

ಜುಲೈ 20 ರಂದು 36,473 ಮಂದಿ ಪರೀಕ್ಷೆಗೊಳಪಟ್ಟಿದ್ದಾರೆ. ಇದೇ 19ರಂದು 35,834 ಜನರಿಗೆ ಪರೀಕ್ಷೆ ಮಾಡಲಾಗಿತ್ತು.

ರಾಜ್ಯದಲ್ಲಿ ಹೊಸದಾಗಿ 730 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸೋಮವಾರ 15,422 ಜನರಿಗೆ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಮಾಡಲಾಗಿದ್ದು, ಈವರೆಗೆ ಒಟ್ಟು 10.57 ಲಕ್ಷಕ್ಕೂ ಹೆಚ್ಚು ಮಂದಿಯ ಗಂಟಲು ದ್ರವದ ಪರೀಕ್ಷೆ ಮಾಡಲಾಗಿದೆ. ಕೋವಿಡ್‌ನಿಂದ ಚೇತರಿಸಿಕೊಂಡವರ ಪ್ರಮಾಣ ಶೇ 35.29ರಷ್ಟಿದ್ದರೆ, ಮರಣ ಪ್ರಮಾಣ ಶೇ 2.08ರಷ್ಟಿದೆ.

ಸೋಂಕಿತರ ಸಂಖ್ಯೆ 67 ಸಾವಿರಕ್ಕೆ: ಕೋವಿಡ್ ಸೋಂಕಿತರ ಸಂಖ್ಯೆ 67,420ಕ್ಕೆ ಮುಟ್ಟಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣ ವರದಿಯಾಗಿದ್ದರೆ, ಬಳ್ಳಾರಿ 234, ಬೆಂಗಳೂರು ಗ್ರಾಮಾಂತರ 208, ಧಾರವಾಡ 200, ವಿಜಯಪುರ 160, ಮೈಸೂರು 149, ಕಲಬುರ್ಗಿ 124, ಉಡುಪಿ 98 ಜನರಿಗೆ ಸೋಂಕು ದೃಢಪಟ್ಟಿದೆ. 580 ಜನರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಕೋವಿಡ್ ಸೋಂಕಿನಿಂದ 72 ಜನ ಸಾವಿಗೀಡಾಗಿರುವುದು ಸೋಮವಾರ ಖಚಿತವಾಗಿದೆ. ಬೆಂಗಳೂರಿನಲ್ಲಿ 31, ದಕ್ಷಿಣ ಕನ್ನಡ 7, ಧಾರವಾಡದಲ್ಲಿ 6, ಮೈಸೂರಿನಲ್ಲಿ 5, ಬೀದರ್‌ 4, ಬಾಗಲಕೋಟೆ 3 ಮಂದಿ ಸಾವಿಗೀಡಾಗುವುದರೊಂದಿಗೆ ಮೃತರ ಒಟ್ಟು ಸಂಖ್ಯೆ 1,403ಕ್ಕೆ ಏರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT