ಗುರುವಾರ , ಫೆಬ್ರವರಿ 20, 2020
30 °C

1984ರ ಸಿಖ್‌ ವಿರೋಧಿ ದಂಗೆ: ಸಜ್ಜನ್‌ಕುಮಾರ್ ಅರ್ಜಿ ತಿರಸ್ಕರಿಸಲು ಸಿಬಿಐ ಮನವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿ ಹೈಕೋರ್ಟ್‌ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ 1984ರ ಸಿಖ್‌ ವಿರೋಧಿ ದಂಗೆಯ ಆರೋಪಿ ಸಜ್ಜನ್‌ ಕುಮಾರ್ ತಮಗೆ ವಿಧಿಸಿರುವ ಶಿಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವಂತೆ ಸಿಬಿಐ ಸುಪ್ರೀಂ ಕೋರ್ಟ್‌ಗೆ ಶುಕ್ರವಾರ ಮನವಿ ಮಾಡಿದೆ.

ಜಾಮೀನು ಅರ್ಜಿಗೆ ಪ್ರತಿಕ್ರಿಯೆ ನೀಡಿರುವ ಸಿಬಿಐ, ‘ಸಜ್ಜನ್‌ ಕುಮಾರ್‌ಗೆ ಸಾಕಷ್ಟು ರಾಜಕೀಯ ಪ್ರಭಾವವಿದೆ. ಅಲ್ಲದೆ ಪ್ರಭಾವ ಬೀರುವಷ್ಟು ಅಥವಾ ಭಯೋತ್ಪಾದನೆ ಪ್ರಚೋದಿಸುವ ಸಾಮರ್ಥ್ಯ ಇದೆ’ ಎಂದು ಹೇಳಿದೆ.

‘ಸಜ್ಜನ್‌ಗೆ ಜಾಮೀನು ನೀಡಿದರೆ ಪ್ರಕರಣದಲ್ಲಿ ಬಾಕಿ ಇರುವ ವಿಚಾರಣೆಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ’ ಎಂದು ಸಿಬಿಐ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. 

ಸಜ್ಜನ್‌ ಕುಮಾರ್ ಅವರ ರಾಜಕೀಯ ಪ್ರಭಾವ, ನ್ಯಾಯಸಮ್ಮತ ಮತ್ತು ವೇಗವಾದ ತನಿಖೆಗೆ ಅಡ್ಡಿಯಾಗಬಹುದು ಮತ್ತು ಸಿಖ್‌ ವಿರೋಧಿ ದಂಗೆಯ ಸಂತ್ರಸ್ತರಿಗೆ ನ್ಯಾಯಕ್ಕೆ ಧಕ್ಕೆಯಾಗಬಹುದು ಎಂದು ಹೇಳಿದೆ. 

1984 ರ ನವೆಂಬರ್‌ 1 ಮತ್ತು 2 ರಂದು ನೈರುತ್ಯ ದೆಹಲಿಯ ದಂಡು ಪ್ರದೇಶದ ರಾಜ್‌ನಗರ ಸೆಕ್ಟರ್‌ 1ರಲ್ಲಿ ಐವರು ಸಿಖ್‌ ವ್ಯಕ್ತಿಗಳ ಹತ್ಯೆ ಮತ್ತು ರಾಜ್‌ನಗರ ಸೆಕ್ಟರ್‌ 2ರಲ್ಲಿ ಗುರುದ್ವಾರವೊಂದನ್ನು ಸುಟ್ಟುಹಾಕಿದ ಪ್ರಕರಣದಲ್ಲಿ ಸಜ್ಜನ್‌ ಕುಮಾರ್‌ಗೆ ಶಿಕ್ಷೆ ವಿಧಿಸಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು