ಭಾನುವಾರ, ಮಾರ್ಚ್ 29, 2020
19 °C

ನಿರ್ಭಯಾ ಅತ್ಯಾಚಾರಿ ಪವನ್ ಗುಪ್ತಾ ದಯಾ ಅರ್ಜಿ ತಿರಸ್ಕರಿಸಿದ ರಾಮನಾಥ ಕೋವಿಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

pawan gupta

ನವದೆಹಲಿ: 2012 ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ ಪವನ್‌ ಕುಮಾರ್‌ ಗುಪ್ತಾ ಸಲ್ಲಿಸಿದ್ದ ದಯಾ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಬುಧವಾರ ತಿರಸ್ಕರಿಸಿದ್ದಾರೆ.

ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡಿರುವುದರಿಂದ ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ದಿನಾಂಕ ನಿರ್ಧರಿಸಲು ತಿಹಾರ್ ಜೈಲು ಅಧಿಕಾರಿಗಳು ದೆಹಲಿ ಕೋರ್ಟ್‌ಗೆ ಮೊರೆಹೋಗಲಿದ್ದಾರೆ. 

ನಿರ್ಭಯಾ ಪ್ರಕರಣದ ಮೂವರು ಅಪರಾಧಿಗಳ ದಯಾ ಅರ್ಜಿಯನ್ನು ಕೋವಿಂದ್ ಅವರು ಈ ಹಿಂದೆಯೇ ತಿರಸ್ಕರಿಸಿದ್ದರು . ಇದಾದ ನಂತರ ಮಾರ್ಚ್ 3 ರಂದು ಬೆಳಿಗ್ಗೆ ಆರು ಗಂಟೆಗೆ ದೆಹಲಿಯ ತಿಹಾರ್‌ ಜೈಲಿನಲ್ಲಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿ ನಿಗದಿಯಾಗಿತ್ತು. ಈ ನಡುವೆ  ಪವನ್ ಗುಪ್ತಾ ಸಲ್ಲಿಸಿದ್ದ ದಯಾ ಅರ್ಜಿ ಬಗ್ಗೆ ರಾಷ್ಟ್ರಪತಿ ತೀರ್ಮಾನ ಬಾಕಿ ಇದ್ದುದರಿಂದ  ಮರಣದಂಡನೆ ದಿನಾಂಕ ಮುಂದೂಡಲಾಗಿತ್ತು.

ಇದನ್ನೂ ಓದಿ:  ನಿರ್ಭಯಾ: ಅಪರಾಧಿಗಳಿಗೆ ನಾಳೆ ಮರಣದಂಡನೆ ಇಲ್ಲ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು