ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ದಿನ ಲಾಕ್‌ಡೌನ್: ಏನಿರುತ್ತದೆ? ಏನು ಇರುವುದಿಲ್ಲ?

Last Updated 25 ಮಾರ್ಚ್ 2020, 2:24 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ ಹರಡುವುದನ್ನು ತಡೆಯುವುದಕ್ಕಾಗಿ ದೇಶದ ಪ್ರತಿಯೊಬ್ಬರು ಮಂಗಳವಾರ ಮಧ್ಯರಾತ್ರಿಯಿಂದ 21 ದಿನ ಮನೆಯಿಂದ ಹೊರಗೆ ಬರಲೇಬಾರದು. ಇದು ಸಂಪೂರ್ಣ ಲಾಕ್‌ಡೌನ್‌ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಲಾಕ್‌ಡೌನ್ ಕರ್ಫ್ಯೂ ರೀತಿಯಂತೆಯೇ ಇರುತ್ತದೆ. 21 ದಿನಗಳ ಲಾಕ್‌ಡೌನ್ ವೇಳೆ ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.

ಲಾಕ್‌ಡೌನ್: ಏನಿರುತ್ತದೆ? ಏನು ಇರಲ್ಲ?

ಇವುಗಳು ಇರಲ್ಲ
- ಯಾವುದೇ ಸಂಚಾರ ವ್ಯವಸ್ಥೆ, ಬಸ್, ರೈಲು, ವಿಮಾನ
- ಕೆಲವೊಂದು ಕಚೇರಿಗಳನ್ನು ಹೊರತು ಪಡಿಸಿ ಬಹುತೇಕ ಸರ್ಕಾರಿ ಕಚೇರಿಗಳು
- ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು
- ಕೈಗಾರಿಕಾ ಸಂಸ್ಥೆಗಳು
- ಶಿಕ್ಷಣ ಸಂಸ್ಥೆಗಳು
- ಧಾರ್ಮಿಕ ಕ್ಷೇತ್ರಗಳು
- ಎಲ್ಲ ಸಾಮಾಜಿಕ, ರಾಜಕೀಯ, ಶಿಕ್ಷಣ, ಮನರಂಜನೆ,ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಮಾರಂಭಗಳು

ಇವುಗಳು ಲಭ್ಯ
- ಬ್ಯಾಂಕ್, ಇನ್ಶೂರೆನ್ಸ್ ಕಚೇರಿ, ಎಟಿಎಂ
- ನೈರ್ಮಲ್ಯ ಸೇವೆ, ನೀರು ಮತ್ತು ವಿದ್ಯುತ್
- ಎಲ್ಲ ರೀತಿಯ ವೈದ್ಯಕೀಯ ಸೇವೆ (ಖಾಸಗಿ ಮತ್ತು ಸರ್ಕಾರಿ), ಮೆಡಿಕಲ್ ಶಾಪ್, ಲ್ಯಾಬ್, ಕ್ಲಿನಿಕ್, ನರ್ಸಿಂಗ್ ಹೋಮ್, ಆ್ಯಂಬುಲೆನ್ಸ್
- ವೈದ್ಯಕೀಯ ಸೇವೆ ಸಲ್ಲಿಸುವ ವೈದ್ಯರು, ನರ್ಸ್, ಪ್ಯಾರಾಮೆಡಿಕಲ್ ಸಿಬ್ಬಂದಿ ಮತ್ತು ಆಸ್ಪತ್ರೆಯ ಇತರ ಸಿಬ್ಬಂದಿಗಳಿಗೆ ವಾಹನ ಸೌಕರ್ಯ
- ರೇಷನ್ ಅಂಗಡಿ, ಆಹಾರ, ದಿನಬಳಕೆಯ ವಸ್ತುಗಳು, ಹಣ್ಣು ಮತ್ತು ತರಕಾರಿ,ಹಾಲು ಮತ್ತು ಹಾಲಿನ ಉತ್ಪನ್ನಗಳು, ಮಾಂಸ ಮತ್ತು ಮೀನು, ಪ್ರಾಣಿಗಳ ಆಹಾರ
- ಆಹಾರ ಮನೆಗೆ ತಲುಪಿಸುವ ಸೇವೆ, ಔಷಧಿ ಮತ್ತು ವೈದ್ಯಕೀಯ ಸಲಕರಣೆಗಳನ್ನು ಮನೆಗೆ ತಲುಪಿಸುವ ಸೇವೆ
-ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ, ಟೆಲಿಕಮ್ಯುನಿಕೇಷನ್, ಅಂತರ್ಜಾಲ ಸೇವೆ, ಬ್ರಾಡ್‌ಕಾಸ್ಟಿಂಗ್ ಮತ್ತು ಕೇಬಲ್ ಸರ್ವೀಸ್, ಐಟಿ ಆಧಾರಿತ ಇನ್ನಿತರ ಸೇವೆಗಳು (ಅಗತ್ಯವಾದುದು ಮಾತ್ರ)
- ಪೆಟ್ರೋಲ್ ಪಂಪ್, ಎಲ್‌ಪಿಜಿ, ಪೆಟ್ರೋಲಿಯಂ ಮತ್ತು ಗ್ಯಾಸ್, ಸ್ಟೋರೇಜ್ ಔಟ್‌ಲೆಟ್
-ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣ ಘಟಕ ಮತ್ತು ಅವುಗಳ ಸೇವೆಗಳು
- ಸೆಬಿ ಸೂಚಿತ ಹೂಡಿಕೆ ಮತ್ತು ಸಾಲ ಮಾರುಕಟ್ಟೆ ಸೇವೆ
- ಶೈತ್ಯಾಗಾರ ಮತ್ತು ವೇರ್‌ಹೌಸ್ ಸೇವೆ
- ಖಾಸಗಿ ಸೆಕ್ಯುರಿಟಿ ಸೇವೆ
- ಅಗತ್ಯ ವಸ್ತುಗಳ ತಯಾರಿಕಾ ಘಟಕ
- ನಿರಂತರ ಪ್ರಕ್ರಿಯೆ ಅಗತ್ಯವಿರುವ ಉತ್ಪಾದನಾ ಘಟಕಗಳು (ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿರಬೇಕು)
- ಸರಕು ಸಂಚಾರ, ಅಗ್ನಿಶಾಮಕ, ಕಾನೂನು ವ್ಯವಸ್ಥೆ ಮತ್ತು ತುರ್ತು ಸೇವೆಗಳು
- ಹೋಟೆಲ್, ಹೋಮ್‌ಸ್ಟೇ, ಲಾಡ್ಜ್, ಮೋಟೆಲ್ಸ್ , ಲಾಕ್‌ಡೌನ್‌ನಿಂದಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲಾರದೆ ಸಿಕ್ಕಿಹಾಕಿಕೊಂಡಿರುವ ಪ್ರವಾಸಿಗಳಿಗೆ ತಂಗಲಿರುವ ಸ್ಥಳ, ವೈದ್ಯಕೀಯ ಮತ್ತು ತುರ್ತು ಸೇವಾ ಸಿಬ್ಬಂದಿ, ವೈಮಾನಿಕ ಮತ್ತು ನೌಕಾಪಡೆಯ ಸಿಬ್ಬಂದಿ, ಕ್ವಾರೆಂಟೈನ್‌ಗೆ ಸಹಾಯ ಮಾಡುವ ಸಂಸ್ಥೆಗಳು
- ಅಂತ್ಯ ಸಂಸ್ಕಾರಕ್ಕೆ 20ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ
- ಭದ್ರತಾಪಡೆ, ಸಶಸ್ತ್ರ ಪಡೆ ಮತ್ತು ಖಜಾನೆ
- ಪೆಟ್ರೋಲಿಯಂ, ಸಿಎನ್‌ಜಿ, ಎಲ್‌ಪಿಜಿ, ಪಿಎನ್‌ಜಿ
- ವಿಪತ್ತು ನಿರ್ವಹಣೆ, ಅಂಚೆ ಕಚೇರಿ, ಪೊಲೀಸ್, ಹೋಮ್ ಗಾರ್ಡ್, ಅಗ್ನಿಶಾಮಕ ಮತ್ತು ತುರ್ತು ಸೇವೆ, ಕಾರಾಗೃಹ


ಉಲ್ಲಂಘಿಸಿದರೆ ಏನು ಶಿಕ್ಷೆ?
ಫೆಬ್ರುವರಿ 15ರ ನಂತರ ಹೊರದೇಶದಿಂದ ಅಥವಾ ಹೊರದೇಶಕ್ಕೆ ಹೋಗಿ ಭಾರತಕ್ಕೆ ಮರಳಿದವರು ಮನೆಯಿಂದ ಹೊರಗೆ ಬರಲೇ ಬಾರದು. ಕ್ವಾರಂಟೈನ್ ಸಮಯದಲ್ಲಿ ಅವರು ಮನೆಯಿಂದ ಹೊರಗೆ ಬಂದರೆ 6 ತಿಂಗಳ ವರೆಗೆ ಜೈಲು ಶಿಕ್ಷೆ.
ಕರ್ತವ್ಯಕ್ಕೆ ಅಡ್ಡಿ ಪಡಿಸಿದರೆ: ಒಂದು ಅಥವಾ ಎರಡು ವರ್ಷ ಜೈಲು ಅಥವಾ ದಂಡ
ಸುಳ್ಳು ಆರೋಪ: 2 ವರ್ಷ ಜೈಲು ಮತ್ತು ದಂಡ
ಸುಳ್ಳು ಎಚ್ಚರಿಕೆ: 1 ವರ್ಷದವರೆಗೆ ಜೈಲು ಅಥವಾ ದಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT