ಭಾನುವಾರ, ಸೆಪ್ಟೆಂಬರ್ 19, 2021
29 °C

ಚುಡಾಯಿಸಿದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಆ್ಯಸಿಡ್ ದಾಳಿ: 16 ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟನಾ: ಯುವತಿಯನ್ನು ಚುಡಾಯಿಸಿದ ಯುವಕರನ್ನು ಪ್ರಶ್ನಿಸಿದ್ದಕ್ಕೆ  ಆ್ಯಸಿಡ್ ದಾಳಿ ನಡೆಸಿದ್ದು, ಒಂದೇ ಕುಟುಂಬದ 16 ಮಂದಿಗೆ ಗಾಯಗಳಾಗಿವೆ.

ಮೂರು ಮಹಿಳೆಯರು ಸೇರಿದಂತೆ  16 ಮಂದಿಗೆ ಗಾಯಗಳಾಗಿದ್ದು, ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಿಹಾರ ಪೊಲೀಸರು ಹೇಳಿದ್ದಾರೆ.  

ಪಟನಾದ ವೈಶಾಲಿ ಜಿಲ್ಲೆಯ ದಾವೂದ್‌ನಗರ್ ಮಾಲಿ ತೊಲ ಗ್ರಾಮದಲ್ಲಿ ಈ ಆ್ಯಸಿಡ್  ದಾಳಿ ನಡೆದಿದೆ.  ಕಳೆದ ಕೆಲವು ದಿನಗಳಿಂದ ಆರೋಪಿಗಳು ಕಾಲೇಜು ಹುಡುಗಿಯೊಬ್ಬಳನ್ನು ಚುಡಾಯಿಸಿ, ಕಿರುಕುಳ ನೀಡುತ್ತಿದ್ದರು.

ಚುಡಾಯಿಸಿದನ್ನು ಪ್ರಶ್ನಿಸಿದ ಕುಟುಂಬದವರ ಮೇಲೆ ಸುಮಾರು 20 ಮಂದಿ ಯುವಕರು ದಾಳಿ ನಡೆಸಿದ್ದರು. ಮೊದಲಿಗೆ ವಾಗ್ವಾದ ನಡೆದು ಆಮೇಲೆ ಯುವಕರ ಗುಂಪು ಆ್ಯಸಿಡ್ ದಾಳಿ ನಡೆಸಿದೆ. ಇದರಲ್ಲಿ ಯುವತಿಯ ಕುಟುಂಬದ 16 ಮಂದಿಗೆ ಗಾಯಗಳಾಗಿವೆ ಎಂದು  ಸದಾರ್ ಡಿಎಸ್‌ಪಿ ರಾಘವ್ ದಯಾಳ್ ಹೇಳಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಯುವಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು