ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶೀಯ ವಿಮಾನಯಾನ ಸೇವೆ ಆರಂಭಿಸಲು ಅನುಮತಿ: ಷರತ್ತು ಹತ್ತಾರು

ಮೇ 25ರಿಂದ ದೇಶೀ ಪ್ರಯಾಣಕ್ಕೆ ಅವಕಾಶ
Last Updated 22 ಮೇ 2020, 1:01 IST
ಅಕ್ಷರ ಗಾತ್ರ

ಸೋಮವಾರದಿಂದ (ಮೇ 25) ದೇಶೀಯ ವಿಮಾನಯಾನ ಸೇವೆ ಆರಂಭಿಸಲು ನಾಗರಿಕ ವಿಮಾನಯಾನ ಸಚಿವಾಲಯವು ಅನುಮತಿ ನೀಡಿದೆ. ಆದರೆ ಪ್ರಯಾಣಿಕರು, ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಕಠಿಣ ಷರತ್ತುಗಳನ್ನು ವಿಧಿಸಿದೆ.

‘ಕೋವಿಡ್ ಇರುವವರು ಪ್ರಯಾಣಿಸಲು ಅವಕಾಶವೇ ಇಲ್ಲ. ಹೀಗಾಗಿ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡುವ ಅವಶ್ಯಕತೆ ಇಲ್ಲ. ಪ್ರಯಾಣಿಕರನ್ನು 14 ದಿನ ಕ್ವಾರಂಟೈನ್‌ಗೆ ಹಾಕುವುದು ಪ್ರಾಯೋಗಿಕವೂ ಅಲ್ಲ’ ಎಂದು ವಿಮಾನಯಾನ ಸಚಿವ ಹರಿದೀಪ್ ಸಿಂಗ್ ಪುರಿ ಹೇಳಿದ್ದಾರೆ

ವಿಮಾನಯಾನ ಸಂಸ್ಥೆಗಳು...

* ಮೂರನೇ ಒಂದರಷ್ಟು ವಿಮಾನಗಳ ಹಾರಾಟವನ್ನು ಮಾತ್ರ ಆರಂಭಿಸಬೇಕು

* ಟಿಕೆಟ್ ದರಕ್ಕೆ ಕನಿಷ್ಠ ಮತ್ತು ಗರಿಷ್ಠದ ಮಿತಿ ಹೇರಲಾಗಿದೆ. ಇದು ಮುಂದಿನ ಮೂರು ತಿಂಗಳವರೆಗೆ ಜಾರಿಯಲ್ಲಿ ಇರುತ್ತದೆ

* ಪ್ರತಿ ಪ್ರಯಾಣದ ನಂತರ ವಿಮಾನವನ್ನು ಸಂಪೂರ್ಣ ಸಾನಿಟೈಸ್ ಮಾಡಬೇಕು

* ವಿಮಾನದ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಪರಿಕರ (ಪಿಪಿಇ) ಕಿಟ್ ಒದಗಿಸಬೇಕು. ಪ್ರಯಾಣ ಪೂರ್ಣವಾಗುವವರೆಗೆ ಸಿಬ್ಬಂದಿ ಇವನ್ನು ಧರಿಸಿರಬೇಕು

* ಪ್ರಯಾಣಿಕರಿಗೆ ಮುಖಗವಸು, ಮುಖಕವಚ ಮತ್ತು ಸಾನಿಟೈಸರ್ ಒದಗಿಸಬೇಕು

* ವಿಮಾನದ ಒಳಗೆ ಅನಗತ್ಯ ಓಡಾಟಕ್ಕೆ ಅವಕಾಶ ನೀಡಬಾರದು

* ವಿಮಾನದ ಒಳಗೆ ಪತ್ರಿಕೆ, ನಿಯತಕಾಲಿಕೆಯನ್ನು ಒದಗಿಸಬಾರದು

ಪ್ರಯಾಣಿಕರಿಗೆ...

* ಎಲ್ಲಾ ಪ್ರಯಾಣಿಕರೂ ಟಿಕೆಟ್‌ಗಳನ್ನು ವೆಬ್‌ಚೆಕ್‌–ಇನ್ ಮಾಡಬೇಕು. ಕಂಪ್ಯೂಟರ್ ಇಲ್ಲದ ಪ್ರಯಾಣಿಕರಿಗೆ ದೂರವಾಣಿ ಮೂಲಕ ಚೆಕ್‌ಇನ್‌ಗೆ ಅವಕಾಶ ನೀಡಬೇಕು

* ವಿಮಾನ ಹಾರಾಟದ ಸಮಯಕ್ಕಿಂತ 2 ಗಂಟೆ ಮೊದಲು ವಿಮಾನ ನಿಲ್ದಾಣದಲ್ಲಿ ಇರಬೇಕು. ಅಧಿಕೃತ ಟ್ಯಾಕ್ಸಿಗಳನ್ನು ಮಾತ್ರ ಬಳಸಬೇಕು

* ವಿಮಾನ ನಿಲ್ದಾಣ ಪ್ರವೇಶದ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಲೇಬೇಕು. ವಿಮಾನ ಪ್ರಯಾಣದ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಲೇಬೇಕು

* ವಿಮಾನದಲ್ಲಿ ಒಂದು ಕ್ಯಾಬಿನ್ ಬ್ಯಾಗ್ ಮತ್ತು ಒಂದು ಚೆಕ್‌–ಇನ್‌ ಬ್ಯಾಗ್‌ ಕೊಂಡೊಯ್ಯಲು ಮಾತ್ರ ಅವಕಾಶ

* ಎಲ್ಲಾ ಪ್ರಯಾಣಿಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ‘ಆರೋಗ್ಯ ಸೇತು ಆ್ಯಪ್‌’ ಅಳವಡಿಸಿಕೊಂಡಿರಬೇಕು. ಆ್ಯಪ್‌ನಲ್ಲಿ ಕೆಂಪು ಸೂಚನೆ ಇದ್ದರೆ, ಆ ಪ್ರಯಾಣಿಕರಿಗೆ ಪ್ರಯಾಣ ಮುಂದುವರಿಸಲು ಅವಕಾಶ ನೀಡುವುದಿಲ್ಲ. ಸ್ಮಾರ್ಟ್‌ಫೋನ್‌ ಇಲ್ಲದವರು, ‘ನಮ್ಮ ಆರೋಗ್ಯ ಸರಿ ಇದೆ’ ಎಂಬ ಘೋಷಣಾ ಪತ್ರ ನೀಡಬೇಕು

* ಎಲ್ಲಾ ಪ್ರಯಾಣಿಕರನ್ನು ಕಡ್ಡಾಯ ಉಷ್ಣಾಂಶ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಿಗದಿಗಿಂತ ಹೆಚ್ಚು ಉಷ್ಣಾಂಶವಿದ್ದರೆ, ಪ್ರಯಾಣ ಮುಂದುವರಿಸುವಂತಿಲ್ಲ. ಯಾವುದೇ ದಂಡವಿಲ್ಲದೆ ಬೇರೆ ದಿನ ಪ್ರಯಾಣಿಸಲು ಅವಕಾಶ

* ವೃದ್ಧರು, ಗರ್ಭಿಣಿಯರು, ಕಾಯಿಲೆ ಇರುವವರು ಪ್ರಯಣಿಸದೇ ಇರುವುದು ಒಳಿತು. ಕ್ವಾರಂಟೈನ್‌ಗೆ ಒಳಗಾದವರು, ಕೆಂಪು ವಲಯದಿಂದ ಬಂದವರು, ಕಂಟೈನ್‌ಮೆಂಟ್ ಪ್ರದೇಶಗಳಿಂದ ಬಂದವರಿಗೆ ವಿಮಾನ ಪ್ರಯಾಣಕ್ಕೆ ಅವಕಾಶವಿಲ್ಲ

* ವಿಮಾನದಲ್ಲಿ ಆಹಾರ–ಉಪಹಾರ ಒದಗಿಸುವುದಿಲ್ಲ. ನೀರಿನ ಬಾಟಲಿ ಮಾತ್ರ ನೀಡಲಾಗುತ್ತದೆ. ಪ್ರಯಾಣಿಕರು ಯಾವುದೇ ತಿನಿಸುಗಳನ್ನು ವಿಮಾನದ ಒಳಗೆ ಸೇವಿಸಬಾರದು

* ಶೌಚಾಲಯ ಬಳಕೆಯನ್ನು ಕಡಿಮೆ ಮಾಡಬೇಕು

ವಿಮಾನ ನಿಲ್ದಾಣಗಳು...

* ಚೆಕ್‌–ಇನ್‌, ಬೋರ್ಡಿಂಗ್‌ ಸ್ಥಳಗಳಲ್ಲಿ ಪ್ರಯಾಣಿಕರು ಗುಂಪುಗೂಡದಂತೆ ನೋಡಿಕೊಳ್ಳಬೇಕು

* ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಗುರುತಿಸಲಾದ ಸ್ಥಳದಲ್ಲೇ ಪ್ರಯಾಣಿಕರು ನಿಲ್ಲುವಂತೆ ಎಚ್ಚರವಹಿಸಬೇಕು

* ಪದೇ ಪದೇ ಸ್ಪರ್ಶಕ್ಕೆ ಒಳಗಾಗುವ ಜಾಗಗಳನ್ನು ಪ್ರತಿ 30 ನಿಮಿಷಕ್ಕೆ ಒಮ್ಮೆ ಸಾನಿಟೈಸ್ ಮಾಡಬೇಕು

* ಮಳಿಗೆಗಳಲ್ಲಿ ಡಿಜಿಟಲ್ ಪಾವತಿಗೆ ಮಾತ್ರ ಅವಕಾಶ ನೀಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT