ಭಾನುವಾರ, ಫೆಬ್ರವರಿ 23, 2020
19 °C

ಚೀನಾದ ವೀಸಾ ಮಾನ್ಯತೆ ರದ್ದುಗೊಳಿಸಿದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಚೀನಾದವರಿಗೆ ಭಾರತ ನೀಡಿರುವ ವೀಸಾಗಳ ಮಾನ್ಯತೆಯನ್ನು ಭಾರತ ಸರ್ಕಾರ ಗುರುವಾರ ರದ್ದು ಮಾಡಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ. 

‘ಸದ್ಯ ಅಸ್ತಿತ್ವದಲ್ಲಿರುವ ಇ–ವೀಸಾಗಳಿಗೆ ಮಾನ್ಯತೆ ಇರುವುದಿಲ್ಲ. ಹಾಗೆಯೇ, ಸಾಮಾನ್ಯ ವೀಸಾಗಳೂ ಮಾನ್ಯತೆ ಕಳೆದುಕೊಳ್ಳಲಿವೆ. ಅನಿವಾರ್ಯ ಕಾರಣಗಳಿಗಾಗಿ ಭಾರತಕ್ಕೆ ಬರಬೇಕಾದವರು ವೀಸಾದ ಅಗತ್ಯವಿದ್ದರೆ ಅವರು ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು. ಅಥವಾ ಹೊಸದಾಗಿ ವಿಸಾಕ್ಕೆ ಅರ್ಜಿ ಸಲ್ಲಿಸಬೇಕು,’ ಎಂದು ರವೀಶ್‌ ಕುಮಾರ್‌ ತಿಳಿಸಿದ್ದಾರೆ. 

‘ಈಗಾಗಲೇ 640 ಭಾರತೀಯರನ್ನು ನಾವು ಯಶಸ್ವಿಯಾಗಿ ದೇಶಕ್ಕೆ ಕರೆ ತಂದಿದ್ದೇವೆ. ಏಳು ಮಂದಿ ಮಾಲ್ಡೀವ್ಸ್‌ ಪ್ರಜೆಗಳನ್ನೂ ಕರೆತರಲಾಗಿದೆ. ಅತ್ಯಂತ ಸಂಕೀರ್ಣ ಕಾರ್ಯಾಚರಣೆಯನ್ನು ನಾವು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಇದಕ್ಕೆ ನೆರವಾದ ಚೀನಾ ಸರ್ಕಾರದ ನಡೆಯನ್ನು ಭಾರತ ಅಭಿನಂದಿಸುತ್ತೇವೆ,’ ಎಂದು ಅವರು ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು