ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಫಾನ್ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ

Last Updated 20 ಮೇ 2020, 8:49 IST
ಅಕ್ಷರ ಗಾತ್ರ

ಜೋಗೇಶ್‌‌ಗಂಜ್(ಪಶ್ಚಿಮ ಬಂಗಾಳ): ಅಂಫಾನ್ ಚಂಡಮಾರುತಕ್ಕೆ ಸಿಲುಕಿರುವ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಹಲವು ಗ್ರಾಮಗಳ ಜನರನ್ನು ಸ್ಥಳೀಯ ಆಡಳಿತ ತಾತ್ಕಾಲಿಕ ಕೇಂದ್ರಗಳಿಗೆ ಸ್ಥಳಾಂತರಿಸಿದೆ.

ಕೋವಿಡ್ 19 ನಿಂದ ತತ್ತರಿಸಿರುವ ಪಶ್ಚಿಮಬಂಗಾಳದಲ್ಲಿ ಅಂಫಾನ್ ಚಂಡಮಾರುತದಿಂದ ಜನರು ತತ್ತರಿಸಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.ಈ ಸಂಬಂಧ ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್, ಕೋವಿಡ್ -19 ಮತ್ತು ಆಂಫಾನ್ ಸೂಪರ್‌ಸೈಕ್ಲೋನ್ ಎರಡೂ ಭೀಕರ ಸವಾಲು.

ರಾಜ್ಯದ ಜನತೆ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿಅನುಸರಿಸಬೇಕೆಂದುಮನವಿ ಮಾಡಿದ್ದಾರೆ. ಇದರಿಂದ ನಾವು ಸಾವುನೋವುಗಳನ್ನು ತಪ್ಪಿಸಬಹುದು. ಈ ಸಂಬಂಧ ಸಮಯೋಚಿತ ಹಾಗೂನಿಖರವಾದಹವಾಮಾನ ವರದಿಗಳನ್ನು ನೀಡುತ್ತಿರುವಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸುವೆಎಂದು ಟ್ವೀಟ್‌‌ನಲ್ಲಿ ತಿಳಿಸಿದ್ದಾರೆ.

ಭಾರತೀಯ ಕರಾವಳಿ ಕಾವಲು ಪಡೆ 20 ರಕ್ಷಣಾ ತುಕಡಿಗಳನ್ನು ನಿಯೋಜಿಸಿದ್ದು, ಹೆಲಿಕಾಪ್ಟರ್‌ಗಳು, ಹಾಗೂ ಹಡಗುಗಳನ್ನು ರಕ್ಷಣಾ ಕಾರ್ಯಕ್ಕಾಗಿ ಸಜ್ಜಾಗಿ ನಿಂತಿವೆ. ಎಲ್ಲಾ ಕಡೆಗಳಿಂದ ಮಾಹಿತಿಸಂಗ್ರಹಿಸಲಾಗಿದ್ದು, ತೊಂದರೆಗೀಡಾಗಿರುವ ಪ್ರದೇಶಕ್ಕೆ ತಕ್ಷಣವೇ ಕಳುಹಿಸುವುದಾಗಿ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT