ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಇಂದು ಸೇನಾ ದಿನ: ಜನವರಿ 15ರಂದೇ ಏಕೆ ಆಚರಣೆ?

ಸೇನಾದಿನ 2020
Last Updated 15 ಜನವರಿ 2021, 2:57 IST
ಅಕ್ಷರ ಗಾತ್ರ
ADVERTISEMENT
""
"ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಪ್ರತಿಮೆ "

ಪ್ರತಿ ವರ್ಷ ಜನವರಿ 15ರಂದು ಭಾರತದಲ್ಲಿ ಸೇನಾ ದಿನ ಆಚರಿಸಲಾಗುತ್ತಿದೆ. ಯೋಧರಿಗೆ ಗೌರವ ಸಮರ್ಪಿಸುವ ಸಲುವಾಗಿ ದೇಶದ ಎಲ್ಲ ಸೇನಾ ಕಮಾಂಡ್‌ಗಳ ಪ್ರಧಾನ ಕಚೇರಿಗಳಲ್ಲಿ ಸೇನಾ ದಿನ ಆಚರಿಸಲಾಗುತ್ತಿದೆ. ಸೇನಾ ದಿನ ಎಂದರೇನು? ಇದೇ ದಿನ ಯಾಕೆ ಸೇನಾ ದಿನ ಆಚರಿಸುತ್ತಾರೆ? ಇಲ್ಲಿದೆ ಮಾಹಿತಿ:

ಸೇನಾ ದಿನ ಎಂದರೆ...

ಭಾರತೀಯ ಸೇನೆಯ ಕಮಾಂಡರ್ ಇನ್ ಚೀಫ್ ಆಗಿ 1949ರ ಜನವರಿ 15ರಂದು ಲೆಫ್ಟಿನೆಂಟ್ ಜನರಲ್ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಅಧಿಕಾರ ಸ್ವೀಕರಿಸಿದ್ದರು. ಇವರು ಕರ್ನಾಟಕದ ಕೊಡಗಿನವರು.ಭಾರತದಲ್ಲಿ ಕೊನೆಯದಾಗಿ ಕಾರ್ಯನಿರ್ವಹಿಸಿದ್ದ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಜನರಲ್ ಫ್ರಾನ್ಸಿಸ್ ಬಚರ್ ಅವರಿಂದ ಕಾರ್ಯಪ್ಪ ಅಧಿಕಾರ ಸ್ವೀಕರಿಸಿದ್ದರು. ಬ್ರಿಟಿಷರು ಸೇನೆಯ ಅಧಿಕಾರವನ್ನು ಹಸ್ತಾಂತರಿಸಿದ ಈ ಐತಿಹಾಸಿಕ ದಿನವನ್ನು ಸೇನಾ ದಿನ ಎಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರಿಗೆ ಗೌರವ ಸಮರ್ಪಿಸಲಾಗುತ್ತದೆ.

ಜನವರಿ 15ರಂದೇ ಏಕೆ?

1895ರ ಏಪ್ರಿಲ್ 1ರಂದೇ ಭಾರತೀಯ ಸೇನೆ ಅಸ್ತಿತ್ವಕ್ಕೆ ಬಂದಿದ್ದರೂ ಸ್ವಾತಂತ್ರ್ಯಾನಂತರ ತನ್ನ ಮೊದಲ ಕಮಾಂಡರ್ ಇನ್ ಚೀಫ್ ಅನ್ನು ಹೊಂದಿದ್ದು 1949ರಜನವರಿ 15ರಂದು. ಹೀಗಾಗಿ ಇದೇ ದಿನವನ್ನು ಸೇನಾ ದಿನವಾಗಿ ಆಚರಿಸಲಾಗುತ್ತಿದೆ.

ಆಚರಣೆ ಹೇಗೆ?

ಸೇನಾ ಕಮಾಂಡ್‌ಗಳ ಪ್ರಧಾನ ಕಚೇರಿಗಳಲ್ಲಿ ಪಥಸಂಚಲನ, ವೈಮಾನಿಕ ಕಸರತ್ತು ಪ್ರದರ್ಶನ, ಯೋಧರಿಂದ ಬೈಕ್ ಸ್ಟಂಟ್‌ ಸೇರಿದಂತೆ ಅನೇಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಮುಖ್ಯ ಪಥಸಂಚಲನ ದೆಹಲಿಯ ಕಾರ್ಯಪ್ಪ ಪರೇಡ್ ಮೈದಾನದಲ್ಲಿ ನಡೆಯುತ್ತದಲ್ಲದೆ, ಶೌರ್ಯ ಪ್ರಶಸ್ತಿ, ಸೇನಾ ಮೆಡಲ್‌ಗಳನ್ನೂ ಇದೇ ಸಂದರ್ಭದಲ್ಲಿ ವಿತರಿಸಲಾಗುತ್ತದೆ. ದೆಹಲಿಯ ಇಂಡಿಯಾಗೇಟ್‌ನಲ್ಲಿರುವ ‘ಅಮರ್ ಜವಾನ್ ಜ್ಯೋತಿ’ಗೆ ಗೌರವ ಸಲ್ಲಿಸಲಾಗುತ್ತದೆ.‌

ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಕುರಿತು...

‌ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಸ್ವಾತಂತ್ರ್ಯೋತ್ತರ ಭಾರತ ಸೇನೆಯ ಮೊದಲಕಮಾಂಡರ್ ಇನ್ ಚೀಫ್. 1947ರ ಭಾರತ–ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಪಶ್ಚಿಮ ಗಡಿಯಲ್ಲಿ ಅವರು ಭಾರತೀಯ ಸೇನೆಯನ್ನು ಮುನ್ನಡೆಸಿದ್ದರು. ದೇಶದ ಅತ್ಯುನ್ನತ ಸೇನಾ ಗೌರವ ‘ಫೀಲ್ಡ್ ಮಾರ್ಷಲ್’ ಪಡೆದವರಲ್ಲಿ ಒಬ್ಬರು. ದೇಶದಲ್ಲಿ ಈ ಗೌರವಕ್ಕೆ ಪಾತ್ರರಾದವರು ಇಬ್ಬರೇ. ಇನ್ನೊಬ್ಬರುಸ್ಯಾಮ್ ಮಾಣೆಕ್‌ ಷಾ.

ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಪ್ರತಿಮೆ

ಈ ಬಾರಿಯ ವಿಶೇಷ

ದೇಶದ ಸೇನಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಸೇನಾಧಿಕಾರಿ ಕ್ಯಾ‍ಪ್ಟನ್ ತಾನಿಯಾ ಶರ್ಗಿಲ್ ಪಥಸಂಚಲನ ಮುನ್ನಡೆಸುತ್ತಿದ್ದಾರೆ.

ಕ್ಯಾ‍ಪ್ಟನ್ ತಾನಿಯಾ ಶರ್ಗಿಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT