ಭಾನುವಾರ, ಮೇ 16, 2021
22 °C
ಎನ್‌ಟಿಪಿಸಿ, ಜಿಎಸ್‌ಇಸಿಎಲ್‌ ಜೊತೆ ಒಪ್ಪಂದ

ಬಿಎಚ್‌ಇಎಲ್‌ನಿಂದ ಎರಡು ಸೌರವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಾರ್ವಜನಿಕ ವಲಯ ಪ್ರತಿಷ್ಠಿತ ಕಂಪನಿ ಭಾರತ್ ಹೆವಿ ಎಲೆಕ್ಟ್ರಿಕಲ್ಸ್‌ ಲಿಮಿಟೆಡ್‌ (ಬಿಎಚ್‌ಇಎಲ್‌) ₹ 800 ಕೋಟಿ ಮೊತ್ತದಲ್ಲಿ ಎರಡು ಸೌರ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪನೆ ಮಾಡುವ ಸಂಬಂಧ ಕಾರ್ಯಾದೇಶ ಪಡೆದಿದೆ.

ಈ ಸಂಬಂಧ ಎನ್‌ಟಿಪಿಸಿ ಹಾಗೂ ಗುಜರಾತ್‌ ರಾಜ್ಯ ವಿದ್ಯುತ್‌ ನಿಗಮದೊಂದಿಗೆ (ಜಿಎಸ್‌ಇಸಿಎಲ್‌) ಬಿಎಚ್‌ಇಎಲ್‌ ಒಪ್ಪಂದ ಮಾಡಿ ಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಎನ್‌ಟಿಪಿಸಿ ಜೊತೆ ಮಾಡಿಕೊಂಡಿರುವ ಒಪ್ಪಂದದಂತೆ ತೆಲಂಗಾಣದ ರಾಮಗುಂಡಂ ಎಂಬಲ್ಲಿ 100 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯದ ಘಟಕ ಸ್ಥಾಪಿಸಲಿದೆ. ಗುಜರಾತ್‌ನ ಬನಾಸ್‌ಕಾಂಠಾ ಜಿಲ್ಲೆಯ ರಘನೇಸ್ಡಾ ಅಲ್ಟ್ರಾ ಮೆಗಾ ಸೋಲಾರ್‌ ಪಾರ್ಕ್‌ನಲ್ಲಿ 100 ಮೆಗಾವಾಟ್‌ ಸಾಮರ್ಥ್ಯದ ಘಟಕವನ್ನು ಬಿಎಚ್‌ಇಎಲ್‌ ಸ್ಥಾಪಿಸಲಿದೆ.

ಈ ಒಪ್ಪಂದದಿಂದಾಗಿ ಬಿಎಚ್‌ಇಎಲ್‌ 1 ಗಿಗಾವಾಟ್‌ (1,000 ಮೆಗಾವಾಟ್‌) ಸೌರ ವಿದ್ಯುತ್‌ ಉತ್ಪಾದಿಸುವ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಪೈಕಿ 500 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಗೆ ಈಗಾಗಲೇ ಚಾಲನೆ ನೀಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು