ಶನಿವಾರ, ಜುಲೈ 31, 2021
28 °C

ಬಿಹಾರದಲ್ಲಿ ವಲಸೆ ಕಾರ್ಮಿಕರಿಗೆ ಕಾಂಡೋಮ್‌

ಪಿಟಿಐ Updated:

ಅಕ್ಷರ ಗಾತ್ರ : | |

ಪಟ್ನಾ: ಅನಪೇಕ್ಷಿತ ಗರ್ಭಧಾರಣೆಯನ್ನು ತಡೆಯುವ ನಿಟ್ಟಿನಲ್ಲಿ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಮುಗಿಸಿ ಮನೆಗೆ ತೆರಳುತ್ತಿರುವ ಹಾಗೂ ಮನೆಯಲ್ಲೇ ಕ್ವಾರಂಟೈನ್‌ಲ್ಲಿ ಇರುವ ವಲಸೆ ಕಾರ್ಮಿಕರಿಗೆ ಬಿಹಾರ ಆರೋಗ್ಯ ಇಲಾಖೆ ಕಾಂಡೋಮ್‌ಗಳನ್ನು ವಿತರಿಸುತ್ತಿದೆ. 

ವಿವಿಧ ರಾಜ್ಯಗಳಿಂದ 28–29 ಲಕ್ಷ ವಲಸೆ ಕಾರ್ಮಿಕರು ಮರಳಿದ್ದು, ಈ ಪೈಕಿ 8.77 ಲಕ್ಷ ಜನರು 14 ದಿನಗಳ ಕ್ವಾರಂಟೈನ್‌ ಪೂರ್ಣಗೊಳಿಸಿದ್ದಾರೆ. ಇದನ್ನು ಹೊರತುಪಡಿಸಿ ಜಿಲ್ಲಾ ಮಟ್ಟದಲ್ಲಿ 5.30 ಲಕ್ಷ ಕಾರ್ಮಿಕರು ಕ್ವಾರಂಟೈನ್‌ ಕೇಂದ್ರಗಳಲ್ಲಿದ್ದಾರೆ.

‘ಕ್ವಾರಂಟೈನ್‌ ಮುಗಿಸಿ ಕಾರ್ಮಿಕರು ಮನೆಗೆ ತೆರಳುತ್ತಿರುವುದರಿಂದ ಅನಪೇಕ್ಷಿತ ಗರ್ಭಧಾರಣೆಯ ಸಾಧ್ಯತೆಗಳು ಹೆಚ್ಚಿದೆ. ಈ ಕಾರಣದಿಂದಾಗಿ ಅವರಿಗೆ ಕಾಂಡೋಮ್‌ಗಳನ್ನು ನೀಡಲಾಗುತ್ತಿದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಇದು ಕುಟುಂಬ ಯೋಜನೆಯ ಭಾಗವಷ್ಟೇ. ಕೋವಿಡ್‌ಗೂ ಇದಕ್ಕೂ ಸಂಬಂಧವಿಲ್ಲ’ ಎಂದು ಅಧಿಕಾರಿ ಸ್ಪಷ್ಟನೆ ನೀಡಿದರು. ಲಾಕ್‌ಡೌನ್‌ ಸಂದರ್ಭದಲ್ಲಿ ಅನಪೇಕ್ಷಿತ ಗರ್ಭಧಾರಣೆ ಹೆಚ್ಚಾಗಿ ವರದಿಯಾದ ಹಿನ್ನೆಲೆಯಲ್ಲಿ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಸಾಂಸ್ಥಿಕ ಕ್ವಾರಂಟೈನ್‌ ನೋಂದಣಿ ಸ್ಥಗಿತ: ಲಾಕ್‌ಡೌನ್‌ ಸಡಿಲಗೊಳಿಸಿರುವ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರಿಗೆ 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ನೋಂದಣಿಯನ್ನು ಬಿಹಾರ ಸರ್ಕಾರ ಸೋಮವಾರ ಸ್ಥಗಿತಗೊಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು