ಶನಿವಾರ, ಜೂನ್ 6, 2020
27 °C

ದೇಶದಲ್ಲಿ ಕೊರೊನಾವೈರಸ್ ಬಿಕ್ಕಟ್ಟಿಗೆ ಬಿಜೆಪಿ ಸರ್ಕಾರವೇ ಹೊಣೆ: ಕಮಲ್‌ನಾಥ್

ಪಿಟಿಐ Updated:

ಅಕ್ಷರ ಗಾತ್ರ : | |

Kamalnath

ನವದೆಹಲಿ: ಕೊರೊನಾವೈರಸ್‌ನಿಂದ ದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವೇ ಹೊಣೆ ಎಂದು ಕಾಂಗ್ರೆಸ್‌ನ ಹಿರಿಯ ನೇತಾರ ಕಮಲ್‌ನಾಥ್ ಆರೋಪಿಸಿದ್ದಾರೆ.

ಮಧ್ಯಪ್ರದೇಶದ ವಿಧಾನಸಭೆ ಕಾರ್ಯವೆಸಗಲಿ ಮತ್ತು ಅಲ್ಲಿದ್ದ ಕಾಂಗ್ರೆಸ್ ಸರ್ಕಾರ ಪತನವಾಗಲಿ ಎಂಬ ಏಕೈಕ ಉದ್ದೇಶದಿಂದ ಸಂಸತ್ ಕಲಾಪ ನಡೆದಿತ್ತು ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಲ್‌ನಾಥ್ ಹೇಳಿದ್ದಾರೆ.

ಮಧ್ಯಪ್ರದೇಶದ ಜನರನ್ನು ಬಿಜೆಪಿ ಮೂರ್ಖರನ್ನಾಗಿ ಮಾಡಿದ್ದು, ಕೊರೊನಾವೈರಸ್ ವ್ಯಾಪಕವಾಗಿ ಹರಡುತ್ತಿದ್ದರೂ ಅಲ್ಲಿ ಆರೋಗ್ಯ ಸಚಿವರಾಗಲೀ, ಗೃಹ ಸಚಿವರಾಗಲೀ ಇಲ್ಲ. ಜಗತ್ತಿನಲ್ಲಿ ಎಲ್ಲಿಯೂ ಈ ರೀತಿ ಆಗಿರಲಿಕ್ಕಿಲ್ಲ

ದೇಶದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೋಗದ ಪರೀಕ್ಷೆ ನಡೆಸಬೇಕಿದೆ. ಕೋವಿಡ್-19ನಿಂದಾಗಿ ದೇಶ ಆರ್ಥಿಕ ಕುಸಿತ ಅನುಭವಿಸಲಿದ್ದು, ಕೇಂದ್ರದ ಆರ್ಥಿಕ ಪ್ಯಾಕೇಜ್‌ಗಳತ್ತ  ಹೆಚ್ಚಿನ ಗಮನ ಹರಿಸಬೇಕಿದೆ. ಯಾವ ಕ್ಷೇತ್ರಕ್ಕೆ ಗಮನ ಹರಿಸಲಾಗುತ್ತದೆ ಮತ್ತು ಅದರ ಅನುಷ್ಠಾನ ಹೇಗೆ ಆಗುತ್ತದೆ ಎಂಬುದರ ಮೇಲೆ ಯಶಸ್ಸು ಅವಲಂಬಿತವಾಗಿದೆ ಎಂದಿದ್ದಾರೆ ಕಮಲ್‌ನಾಥ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು