ಬುಧವಾರ, ಮಾರ್ಚ್ 3, 2021
24 °C

ಬಜೆಟ್‌ | ಸೆಸ್‌, ಆಮದು ಸುಂಕ ಹೆಚ್ಚಳ: ಪೆಟ್ರೋಲ್‌, ಡೀಸೆಲ್‌, ಚಿನ್ನ ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸೆಸ್ ಹೆಚ್ಚಿಸಿ, ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಳ ಮಾಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಪ್ರಕಟಿಸಿದರು.

₹5 ಲಕ್ಷ ವರೆಗಿನ ಆದಾಯ ಗಳಿಕೆದಾರರಿಗೆ ತೆರಿಗೆ ವಿನಾಯಿತಿ ಘೋಷಿಸಿ ತುಸು ಹೊರೆಯನ್ನು ಇಳಿಸಿದ ನಿರ್ಮಲಾ ಸೀತಾರಾಮನ್‌, ಇಂಧನ ಮತ್ತು ಚಿನ್ನದ ಮೇಲಿನ ತೆರಿಗೆಯನ್ನು ಹೆಚ್ಚಿಸಿರುವುದಾಗಿ ಘೋಷಿಸಿದರು. 

* ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸೆಸ್‌ ಹೆಚ್ಚಳ

* ಚಿನ್ನದ ಮೇಲಿನ ಆಮದು ಸುಂಕ ಶೇ 10ರಿಂದ 12.5ರಷ್ಟು ಹೆಚ್ಚಳ

ಸೆಸ್‌ ಮತ್ತು ಆಮದು ಸುಂಕ ಹೆಚ್ಚಳದಿಂದಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಹೆಚ್ಚಳವಾಗಲಿವೆ.

ಬಜೆಟ್‌ನ ಇತರ ಪ್ರಮುಖ ಅಂಶಗಳು

* 2020ರ ವೇಳೆಗೆ ಭೌತಿಕ ರಶೀದಿ ವ್ಯವಸ್ಥೆ ರದ್ದಾಗಲಿದೆ

* ನಗದು ವ್ಯವಹಾರ ಕಡಿಮೆ ಮಾಡಲು ಡಿಜಿಟಲ್‌ ವ್ಯವಹಾರಕ್ಕೆ ಒತ್ತು

* ವಿದೇಶದಿಂದ ಆಮದಾಗುವ ಪುಸ್ತಕಗಳಿಗೆ ಶೇ 5ರಷ್ಟು ತೆರಿಗೆ ಹೆಚ್ಚಳ

* ರಕ್ಷಣಾ ಸಾಮಗ್ರಿಗಳಿಗೆ ಕಸ್ಟಮ್ಸ್‌ ತೆರಿಗೆ ರದ್ದು

* ತೆರಿಗೆ ಪಾವತಿಗೆ ಮುಖಾಮುಖಿ ಸಲ್ಲಿಕೆ ಕಡ್ಡಾಯವಲ್ಲ. ಆನ್‌ಲೈನ್‌ನಲ್ಲಿ ಸಲ್ಲಿಸಿದರೆ ಸಾಕು.

* ಜಿಎಸ್‌ಟಿಯಿಂದ 17 ತೆರಿಗೆ ಮತ್ತು 30 ನೀತಿಗಳು ರದ್ದಾಗಿವೆ

* ಇವನ್ನೂ ಓದಿ...

ಬಜೆಟ್ | ₹5 ಲಕ್ಷಕ್ಕಿಂತ ಕಡಿಮೆ ಗಳಿಕೆ ಹೊಂದಿದವರಿಗೆ ಆದಾಯ ತೆರಿಗೆ ಇಲ್ಲ ​

* ಬಜೆಟ್‌ | ಮಹಿಳೆಯರ ಶ್ರೇಯೋಭಿವೃಧ್ಧಿಗೆ ‘ನಾರಿ ಟು ನಾರಾಯಣಿ‘

ಬಜೆಟ್ | ರಾಜ್ಯಗಳಿಗೆ ಸಮಾನ ವಿದ್ಯುತ್‌ಗಾಗಿ ‘ಒನ್‌ ನೇಷನ್‌ ಒನ್‌ ಗ್ರಿಡ್‌’ ಯೋಜನೆ​

ಹಣಕಾಸು ಸಚಿವೆ ನಿರ್ಮಲಾ ಅವರಿಂದ ಬಜೆಟ್‌ ಮಂಡನೆ ಆರಂಭ 

ಬಜೆಟ್‌ ಲೈವ್‌ ಅಪ್‌ಡೇಟ್ಸ್‌ಗಾಗಿ http://bit.ly/2YB34Wy ಲಿಂಕ್ ಕ್ಲಿಕ್ ಮಾಡಿ.

ಬಜೆಟ್‌ನ ಸಮಗ್ರ ಮಾಹಿತಿಗೆ https://www.prajavani.net/budget-2019 ಲಿಂಕ್ ನೋಡಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು