ಭಾನುವಾರ, ಜುಲೈ 25, 2021
28 °C

'ಎರಡೂ ಕಡೆ ಸಾವುನೋವು ಸಂಭವಿಸಿದೆ': ಭಾರತೀಯ ಸೇನೆ ಮತ್ತೊಂದು ಹೇಳಿಕೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಲಡಾಖ್‌ನ ಗಲ್ವಾನ್ ಕಣಿವೆಯ ಚೀನಾ ಗಡಿಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಎರಡೂ ದೇಶಗಳಲ್ಲಿ ಸಾವುನೋವು ಸಂಭವಿಸಿದೆ ಎಂದು ಭಾರತೀಯ ಸೇನೆಯು ಸ್ಪಷ್ಟಪಡಿಸಿದೆ. ಈ ಮೊದಲು ಬಿಡುಗಡೆ ಮಾಡಿದ್ದ ಹೇಳಿಕೆಗೆ ತಿದ್ದುಪಡಿ ಮಾಡಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

'ಸೋಮವಾರ ಮಧ್ಯರಾತ್ರಿ ಸಂಘರ್ಷ ನಡೆಯಿತು. ನಮ್ಮ ಕಡೆಯ ಓರ್ವ ಅಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾದರು. ಎರಡೂ ಸೇನೆಗಳ ಹಿರಿಯ ಅಧಿಕಾರಿಗಳು ಉದ್ವಿಗ್ನತೆ ಶಮನಗೊಳಿಸುವ ಪ್ರಯತ್ನ ಆರಂಭಿಸಿದ್ದಾರೆ' ಎಂದು ಸೇನೆ ಹೇಳಿದೆ.

1975ರ ನಂತರ ಇದೇ ಮೊದಲ ಬಾರಿಗೆ ಚೀನಾ ಗಡಿಯಲ್ಲಿ ಸಾವು ಸಂಭವಿಸುವಷ್ಟು ತೀವ್ರವಾದ ಘರ್ಷಣೆ ನಡೆದಿದೆ. ಉದ್ವಿಗ್ನತೆ ಶಮನಗೊಳಿಸಲೆಂದು ಪೂರ್ವ ಲಡಾಖ್‌ನಲ್ಲಿ ಎರಡೂ ದೇಶಗಳ ಹಿರಿಯ ಸೇನಾಧಿಕಾರಿಗಳು ಮಾತುಕತೆ ನಡೆಸುತ್ತಿದ್ದರು.

ಕಳೆದ ಹಲವು ವಾರಗಳಿಂದ ಮುಖಾಮುಖಿಯಾಗಿ ನಿಂತಿದ್ದ ಹಲವು ಪ್ರದೇಶಗಳಿಂದ ಎರಡೂ ಸೇನೆಗಳು ಹಿಂದೆ ಸರಿಯುತ್ತಿದ್ದವು. ಈ ನಡುವೆಯೇ ಸಾವುನೋವು ಸಂಭವಿಸಿರುವುದು ಮುಂದಿನ ಬೆಳವಣಿಗೆಗಳ ಬಗ್ಗೆ ಸಾಕಷ್ಟು ವಿಶ್ಲೇಷಣೆಗಳಿಗೆ ಕಾರಣವಾಗಿದೆ.

ಜೂನ್ 6ರಂದು ಎರಡೂ ಸೇನೆಗಳ ಉನ್ನತ ಅಧಿಕಾರಿಗಳ ಮಾತುಕತೆಯ ನಂತರ ಚೀನಾ ಯೋಧರ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಅವರು ತುಸು ಮೃದುವಾದಂತೆ ಭಾಸವಾಗಿತ್ತು. ಸೈನಿಕರು ಮತ್ತು ಯುದ್ಧೋಪಕರಣಗಳನ್ನು ನಿಯೋಜಿಸುವ ಕಾರ್ಯಾಚಾರಣೆಯು ವೇಗ ಕಳೆದುಕೊಂಡಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು