ಭಾನುವಾರ, ಜುಲೈ 25, 2021
21 °C

ಮಿಥೆನಾಲ್‌ ಮಿಶ್ರಿತ ನಕಲಿ ಸ್ಯಾನಿಟೈಸರ್‌ ಮಾರಾಟ ಜಾಲದ ಬಗ್ಗೆ ಸಿಬಿಐ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅತ್ಯಂತ ವಿಷಕಾರಿ ರಾಸಾಯನಿಕ ಮಿಥೆನಾಲ್‌ ಬಳಸಿ ನಕಲಿ ಹ್ಯಾಂಡ್ ಸ್ಯಾನಿಟೈಸರ್‌ ಮಾರಾಟ ಮಾಡುತ್ತಿರುವ ಜಾಲದ ಬಗ್ಗೆ ಎಲ್ಲ ರಾಜ್ಯಗಳಿಗೆ ಹಾಗೂ ಕೇಂದ್ರಾದಳಿತ ಪ್ರದೇಶಗಳಿಗೆ ಕೇಂದ್ರೀಯ ತನಿಖಾ ದಳ(ಸಿಬಿಐ)ಎಚ್ಚರಿಕೆ ರವಾನಿಸಿದೆ. 

ಈ ಜಾಲದ ಜೊತೆಗೆ ಪಿಪಿಇ ಕಿಟ್‌ ಹಾಗೂ ಕೋವಿಡ್‌–19ಗೆ ಸಂಬಂಧಿಸಿದ ವೈದ್ಯಕೀಯ ಉಪಕರಣಗಳ ಮಾರಾಟಗಾರರ ಸೋಗಿನಲ್ಲಿರುವ ಜಾಲದ ಬಗ್ಗೆಯೂ ಸಿಬಿಐ ಎಚ್ಚರಿಸಿದೆ.

ಈ ತುರ್ತು ಸಂದರ್ಭವನ್ನು ಹಣ ಮಾಡಲು ಈ ಜಾಲವು ಉಪಯೋಗಿಸಿಕೊಳ್ಳುತ್ತಿದ್ದು, ದುಷ್ಕರ್ಮಿಗಳು ಪಿಪಿಇ ಕಿಟ್‌ ತಯಾರಿಕಾ ಕಂಪನಿಗಳ ಪ್ರತಿನಿಧಿಗಳ ಸೋಗಿನಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದಾರೆ. ಆನ್‌ಲೈನ್‌ ಮೂಲಕ ಹಣ ಪಡೆದು ವಂಚಿಸುತ್ತಿದ್ದಾರೆ ಎಂದು ಸಿಬಿಐ ತಿಳಿಸಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು