ಸೋಮವಾರ, ಡಿಸೆಂಬರ್ 16, 2019
17 °C

ಇಂಡೋ-ಟಿಬೆಟಿಯನ್ ಬಾರ್ಡರ್‌ ಪೊಲೀಸ್‌ ಶಿಬಿರದಲ್ಲಿ ಕಿತ್ತಾಟ: 6 ಸಿಬ್ಬಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Indo-Tibetan Border Police

ಛತ್ತೀಸಗಡ: ಇಲ್ಲಿನ ನಾರಾಯಣ್‌ಪುರ ಜಿಲ್ಲೆಯ ಕದೇನರ್ ಇಂಡೋ ಟಿಬೆಟಿಯನ್ ಬಾರ್ಡರ್‌ ಪೊಲೀಸ್‌ ಶಿಬಿರದಲ್ಲಿ ಸಹೋದ್ಯೋಗಿಗಳ ನಡುವೆ ವಾಗ್ವಾದ ನಡೆದು 6 ಮಂದಿ ಸಿಬ್ಬಂದಿ ಗುಂಡಿಗೆ ಬಲಿಯಾಗಿದ್ದಾರೆ. ಈ ಜಗಳದಲ್ಲಿ ಇಬ್ಬರಿಗೆ ಗಾಯಗಳಾಗಿವೆ.

ಜಗಳ ತಾರಕಕ್ಕೇರಿದಾಗ ಸಿಬ್ಬಂದಿಯೊಬ್ಬರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಬಸ್ತಾರ್‌ನ ಐಜಿಪಿ ಸುಂದರರಾಜ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಗುಂಡು ಹಾರಿಸಿದ ನಂತರ ಅದೇ ವ್ಯಕ್ತಿ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಾರಾಯಣ್‌ಪುರ ಪೊಲೀಸ್ ಅಧಿಕಾರಿ  ಮೋಹಿತ್ ಗಾರ್ಗ್ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಜಗಳಕ್ಕೆ ಕಾರಣ ಏನೆಂದು ಸದ್ಯ ತಿಳಿದು ಬಂದಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು