ಮಂಗಳವಾರ, ಫೆಬ್ರವರಿ 18, 2020
16 °C

ನಿರ್ಮಲಾ ಸೀತಾರಾಮನ್ ಅವಕಾಡೊ ತಿನ್ನುತ್ತಾರಾ?: ಚಿದಂಬರಂ ಪ್ರಶ್ನೆ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Congress leaders P Chidambaram, Adhir Ranjan Chowdhury and others stage a protest against hike in onion prices at Parliament during the ongoing Winter session,

ನವದೆಹಲಿ: ಈರುಳ್ಳಿ ಬೆಲೆ ಏರಿಕೆ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿರುವಾಗ ನಾನು ಈರುಳ್ಳಿ ತಿನ್ನುವುದಿಲ್ಲ. ಈರುಳ್ಳಿ- ಬೆಳ್ಳುಳ್ಳಿ  ತಿನ್ನದ ಕುಟುಂಬ ನನ್ನದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಹೇಳಿದ್ದರು.

ನಿರ್ಮಲಾ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನೇತಾರ ಪಿ. ಚಿದಂಬರಂ, ವಿತ್ತ ಸಚಿವರು ಈರುಳ್ಳಿ ತಿನ್ನದೇ ಇರುವುದರಿಂದ ಅದರ ಬೆಲೆ ಏರಿಕೆ ಬಗ್ಗೆ ಅವರು ತಲೆ ಕೆಡಿಸಿಕೊಂಡಿಲ್ಲ. ಹಾಗಾದರೆ  ಅವರು ಏನು  ತಿನ್ನುತ್ತಾರೆ?  ಅವರು ಅವಕಾಡೊ ತಿನ್ನುತ್ತಾರಾ? ಅವರು ಈರುಳ್ಳಿ ತಿನ್ನುವುದಿಲ್ಲವಂತೆ ಎಂದಿದ್ದಾರೆ.

ಇದನ್ನೂ ಓದಿ: ನಾನು ಜಾಸ್ತಿ ಈರುಳ್ಳಿ ತಿನ್ನುವುದಿಲ್ಲ: ನಿರ್ಮಲಾ ಸೀತಾರಾಮನ್

ಮಾರುಕಟ್ಟೆಯಲ್ಲಿ ಅವಕಾಡೊ ಬೆಲೆ ಕೆಜಿಗೆ ₹350- ₹400 ಇದೆ. ಈರುಳ್ಳಿ ಬೆಲೆ ಏರುತ್ತಲೇ ಇದ್ದು ಕೆಲವು ರಾಜ್ಯಗಳಲ್ಲಿ ಕೆಜಿಗೆ ₹180 ಆಗಿದೆ.

ಇದನ್ನೂ ಓದಿ: ಪೆಟ್ರೋಲ್‌ ಮೇಲಿನ ತೆರಿಗೆ ಕಡಿತ ಇಲ್ಲ: ಹಣಕಾಸು ಸಚಿವೆ ನಿರ್ಮಲಾ ಸ್ಪಷ್ಟನೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು