ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಆ ಕುಕೃತ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ವಿಕೃತಿ ಭಾರತದಲ್ಲಿ ಗಣನೀಯ ಪ್ರಮಾಣದಲ್ಲಿ ವರದಿಯಾಗಿದೆ ಎಂದು ಅಮೆರಿಕ ಸರ್ಕಾರ ಭಾರತದ ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೊಗೆ (ಎನ್ಸಿಆರ್ಬಿ) ನೀಡಿರುವ ವರದಿಯಲ್ಲಿ ಬಹಿರಂಗಪಡಿಸಿದೆ.

ಕಳೆದ ಐದು ತಿಂಗಳ ಅವಧಿಯಲ್ಲಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ 25,000ಕ್ಕೂ ಹೆಚ್ಚು ಭಾರತೀಯ ಮಕ್ಕಳಚೈಲ್ಡ್ ಪೊರ್ನೊಗ್ರಫಿ (ಮಕ್ಕಳ ಅಶ್ಲೀಲ ವಿಡಿಯೊ/ಚಿತ್ರ) ಕಂಟೆಂಟ್ ಅಪ್ಲೋಡ್ ಆಗಿದೆ ಎಂಬ ಮಾಹಿತಿ ಈ ವರದಿಯಲ್ಲಿದೆ.

ಈ ಪಟ್ಟಿಯಲ್ಲಿರಾಷ್ಟ್ರ ರಾಜಧಾನಿ ದೆಹಲಿ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳು ನಂತರದ ಸ್ಥಾನದಲ್ಲಿವೆ ಎಂದು ಕೇಂದ್ರ ಗೃಹ ಇಲಾಖೆ ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯನ್ ಎಕ್ಸ್ಪ್ರೆಸ್’ ಜಾಲತಾಣ ವರದಿ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಗುವೊಂದು ಹಿಂಸೆ ಅನುಭವಿಸುತ್ತಿರುವ ಅಥವಾ ಬೆತ್ತಲೆಯಾಗಿರುವ ಫೋಟೊ ಅಥವಾ ವಿಡಿಯೊಗಳನ್ನು ಪತ್ತೆಹಚ್ಚಬಲ್ಲ ವಿಶೇಷ ಸೂತ್ರದ (ಆಲ್ಗರಿದಂ) ಅನ್ವಯ ಕೆಲಸ ಮಾಡುವಸಾಫ್ಟ್ವೇರ್ಗಳನ್ನು ಬಳಸಿ ಚೈಲ್ಡ್ ಪೊರ್ನೊಗ್ರಫಿಯನ್ನು ಅಮೆರಿಕದ ಎನ್ಸಿಎಂಇಸಿ (National Center for Missing and Exploited Children- ನಾಪತ್ತೆಯಾದ ಮತ್ತು ಶೋಷಿತ ಮಕ್ಕಳ ರಾಷ್ಟ್ರೀಯ ಸಂಸ್ಥೆ) ಪತ್ತೆ ಮಾಡಿದೆ.

ಪತ್ತೆಯಾಗಿರುವ ಒಟ್ಟು 25,000 ಪ್ರಕರಣಗಳ ಪೈಕಿ ಮಹಾರಾಷ್ಟ್ರದಿಂದ1,700 ಪ್ರಕರಣಗಳು ವರದಿಯಾಗಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಪೊಲೀಸ್ ಇಲಾಖೆ‘ಆಪರೇಷನ್ ಬ್ಲಾಕ್ಫೇಸ್’ ಹೆಸರಿನ ಕಾರ್ಯಾಚರಣೆ ಆರಂಭಿಸಿದೆ. ಇಂಥ ಪ್ರಕರಣಗಳನ್ನು ಹೇಗೆ ನಿರ್ವಹಿಸಬೇಕು ಎನ್ನುವ ಬಗ್ಗೆ ಎಸ್ಒಪಿ (ನಿರ್ವಹಣೆಯಘೋಷಿತ ವಿಧಿವಿಧಾನ) ಜೊತೆಗೆ ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ಕ್ಷಿಪ್ರವಾಗಿ ಮಾಹಿತಿ ರವಾನಿಸುತ್ತಿದೆ.

ಅಮೆರಿಕ ಸರ್ಕಾರ ನೀಡಿರುವ ಮಾಹಿತಿ ಆಧರಿಸಿ ಕೇಂದ್ರ ಗೃಹ ಇಲಾಖೆ ವಿವಿಧ ರಾಜ್ಯಗಳ ಪೊಲೀಸರನ್ನು ಎಚ್ಚರಿಸಿದ್ದು,ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿಹಲವು ಎಫ್ಆರ್ಗಳು ದಾಖಲಾಗಿವೆ. ದೆಹಲಿ, ಗುಜರಾತ್ ಮತ್ತು ಕೇರಳ ರಾಜ್ಯಗಳಲ್ಲಿಹಲವರನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.