ನವದೆಹಲಿ:ಕೈಗಾರಿಕೆಗಳು, ಕೃಷಿತ್ಯಾಜ್ಯದ ದಹನ, ವಾಹನಗಳ ಹೊಗೆಯಿಂದ ವಾತಾವರಣಕ್ಕೆ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣವನ್ನು ತಗ್ಗಿಸಲು ಕೇಂದ್ರ ಸರ್ಕಾರಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಇಂಗಾಲದ ಡೈಆಕ್ಸೈಡ್‌ನ ಉಗುಳುವಿಕೆಯು 2017ಕ್ಕಿಂತ 2018ರಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಏರಿಕೆ ಪ್ರಮಾಣದಲ್ಲಿ ಭಾರತವು ವಿಶ್ವದ ಎಲ್ಲಾ ದೇಶಗಳನ್ನು ಮೀರಿಸಿದೆ.

ಉಗುಳುವಿಕೆ: 3ನೇ ಸ್ಥಾನ

ಜಗತ್ತಿನ ಒಟ್ಟು ಇಂಗಾಲ ಡೈಆಕ್ಸೈಡ್ ಉಗುಳುವಿಕೆಯಲ್ಲಿ ವಿವಿಧ ದೇಶಗಳ ಪಾಲು

* 27 % ಚೀನಾ

* 15 % ಅಮೆರಿಕ

* 7 % ಭಾರತ

ಏರಿಕೆ: 1ನೇ ಸ್ಥಾನ

ಇಂಗಾಲದ ಡೈಆಕ್ಸೈಡ್ ಉಗುಳುವಿಕೆಯಲ್ಲಿ ವಾರ್ಷಿಕ ಏರಿಕೆ ಪ್ರಮಾಣ

* 6.3 % ಭಾರತ

* 4.7 % ಚೀನಾ

* 2.5 % ಅಮೆರಿಕ

ಕಾರಣಗಳು

* ಭಾರತದಲ್ಲಿ ವಿದ್ಯುತ್ ಬಳಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ

* ವಿದ್ಯುತ್ ಉತ್ಪಾದನೆಗೆ ಉಷ್ಣವಿದ್ಯುತ್ ಸ್ಥಾವರಗಳನ್ನೇ ನೆಚ್ಚಿಕೊಂಡಿರುವುದರಿಂದ ಇಂಗಾಲದ ಉಗುಳುವಿಕೆ ಹೆಚ್ಚು

* ವಾಹನಗಳಲ್ಲಿ, ಕೈಗಾರಿಕೆಗಳಲ್ಲಿ ಮತ್ತು ವಿದ್ಯುತ್ ಜನಕಗಳಲ್ಲಿ ಪಳೆಯುಳಿಕೆ ಇಂಧನಗಳ ಬಳಕೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ

ಮುಗಿಯುತ್ತಾ ಬರುತ್ತಿದೆ ಇಂಗಾಲದ ಬಜೆಟ್

ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮಗಳಿಂದ ಪಾರಾಗುವಷ್ಟು ಮಾತ್ರ ಇಂಗಾಲದ ಡೈಆಕ್ಸೈಡ್ ವಾತಾವರಣಕ್ಕೆ ಬಿಡುಗಡೆಯಾಗಬೇಕು. ಈ ಮಿತಿಯನ್ನೇ ಇಂಗಾಲದ ಬಜೆಟ್ ಎನ್ನಲಾಗುತ್ತದೆ. ಈಗಾಗಲೇ ಈ ಬಜೆಟ್‌ನಲ್ಲಿ ಅರ್ಧದಷ್ಟನ್ನು ಬಳಸಲಾಗಿದೆ. ಇಂದಿನಷ್ಟೇ ಪ್ರಮಾಣದ ವಾಯುಮಾಲಿನ್ಯ ಮುಂದುವರಿದರೆ2045ರ ಹೊತ್ತಿಗೆ ಈ ಬಜೆಟ್ ಸಂಪೂರ್ಣ ಖಾಲಿಯಾಗಲಿದೆ.

‘ಮುಂದುವರಿದ ಮತ್ತು ಶ್ರೀಮಂತ ದೇಶಗಳು ಇಂಗಾಲದ ಬಜೆಟ್‌ನ ಬಹುಪಾಲನ್ನು ಬಳಸಿವೆ. ಭಾರತದಂತಹ ರಾಷ್ಟ್ರಗಳಿಗೆ ಈ ಬಜೆಟ್‌ನಲ್ಲಿ ಪಾಲು ಕಡಿಮೆ. ಹೀಗಾಗಿ ವಾಯುಮಾಲಿನ್ಯ ರಹಿತ ಅಭಿವೃದ್ಧಿ ಮಾದರಿಗಳನ್ನು ಭಾರತ ಕಂಡುಕೊಳ್ಳಬೇಕಿದೆ’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಧಾರ: ಗ್ಲೋಬಲ್ ಕಾರ್ಬನ್ ಬಜೆಟ್–2018 ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.