ಗುರುವಾರ , ಫೆಬ್ರವರಿ 27, 2020
19 °C

ಮೋದಿಜೀ ನಮ್ಮನ್ನು ರಕ್ಷಿಸಿ: ಜಪಾನ್ ಹಡಗಿನಿಂದ ಎಸ್‍ಒಎಸ್ ಸಂದೇಶ ಕಳಿಸಿದ ಭಾರತೀಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Indian Crew

ಕೋಲ್ಕತ್ತ: ಕೊರೊನಾ ವೈರಸ್‌ ಭೀತಿಯಿಂದಾಗಿ ಡೈಮಂಡ್‌ ಪ್ರಿನ್ಸೆಸ್‌ ಕ್ರೂಸ್‌ನ್ನು (ಪ್ರಯಾಣಿಕರ ದೊಡ್ಡ ಹಡಗು) ದಡಕ್ಕೆ ಪ್ರವೇಶಿಸದಂತೆ ಜಪಾನ್ ತಡೆದಿದೆ. ಫೆಬ್ರುವರಿ 5ರಂದು ಜಪಾನ್ ಈ ಹಡಗು ದಡಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿತ್ತು.

ಈ ಹಡಗಿನಲ್ಲಿರುವ 66 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದೆ ಎಂದು ಡೈಮಂಡ್ ಪ್ರಿನ್ಸೆಸ್‌ನಲ್ಲಿರುವ ಭಾರತೀಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

 3,700 ಪ್ರಯಾಣಿಕರು ಇರುವ ಈ ಕ್ರೂಸ್‌ನಲ್ಲಿ 160 ಮಂದಿ ಭಾರತೀಯರಿದ್ದಾರೆ.

ಈ  ಪೈಕಿ ಉತ್ತರ ಬಂಗಾಳದ ಬಾಣಸಿಗ ಬಿನಯ್ ಕುಮಾರ್ ಸರ್ಕಾರ್,  ಫೇಸ್‌ಬುಕ್‌ನಲ್ಲಿ ವಿಡಿಯೊವೊಂದನ್ನು ಸೋಮವಾರ ಪೋಸ್ಟಿಸಿದ್ದು ಭಾರತೀಯರನ್ನು ರಕ್ಷಿಸುವಂತೆ ಮೋದಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

'ಇವತ್ತು 66 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದೆ. ಈಗ ಹಡಗಿನಲ್ಲಿರುವ 137 ಮಂದಿ ಕೊರೊನಾ ಸೋಂಕಿಗೊಳಗಾಗಿದ್ದಾರೆ. ದಿನದಿಂದ ದಿನಕ್ಕೆ ಸೋಂಕು ವ್ಯಾಪಿಸುತ್ತಾ ಬರುತ್ತಿದ್ದು, ಸೋಂಕು ತಗಲಿರುವ ವ್ಯಕ್ತಿಗಳನ್ನು ಬೇರೆಡೆಗೆ ವರ್ಗಾಯಿಸಬೇಕಿದೆ. ಆದಷ್ಟು  ಬೇಗ ನಮ್ಮನ್ನು ರಕ್ಷಿಸಿ. ಏನಾದರೂ ಆದರೆ ಏನು ಮಾಡಲಿ?  ಭಾರತ ಸರ್ಕಾರಕ್ಕೆ ನಾನು ಮಾಡುವ ಮನವಿ ಏನೆಂದರೆ ಮೋದಿಜೀ ದಯವಿಟ್ಟು  ನಮ್ಮನ್ನು ಸ್ಥಳಾಂತರ ಮಾಡಿ, ಮನೆಗೆ ಸುರಕ್ಷಿತವಾಗಿ ತಲುಪಿಸಿ' ಎಂದು ಬಿನಯ್ ಕುಮಾರ್ ವಿಡಿಯೊದಲ್ಲಿ ಹೇಳಿದ್ದಾರೆ.

ಇನ್ನಷ್ಟು: 
ಕೊರೊನಾ ವೈರಸ್ | ಭಾರತೀಯರಿರುವ ಹಡಗಿಗೆ ಏಕಾಏಕಿ ನಿರ್ಬಂಧ ವಿಧಿಸಿದ ಜಪಾನ್
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು