ಸೋಮವಾರ, ಮಾರ್ಚ್ 30, 2020
19 °C

ದೆಹಲಿಯಲ್ಲಿ ಕೋವಿಡ್–19 ಸೋಂಕಿತ ವೈದ್ಯನ ಪತ್ನಿ, ಮಗಳು ಐವರಲ್ಲಿ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿಯ ಕೋವಿಡ್‌–19 ಸೋಂಕಿತ ವೈದ್ಯರೊಬ್ಬರ ಹೆಂಡತಿ (48) ಹಾಗೂ ಮಗಳು (17) ಸೇರಿದಂತೆ ಹೊಸದಾಗಿ ಒಟ್ಟು ಐವರಲ್ಲಿ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 35ಕ್ಕೆ ತಲುಪಿದೆ ಎಂದು ದೆಹಲಿಯ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವೈದ್ಯ ಇಲ್ಲಿನ ಶಾಹ್ದಾರದಲ್ಲಿ ನಡೆಸುತ್ತಿರುವ ಕ್ಲಿನಿಕ್‌ಗೆ ಸೌದಿ ಅರೇಬಿಯಾದಿಂದ ಹಿಂದಿರುಗಿದ್ದ ಮಹಿಳೆಯೊಬ್ಬರು (38) ಬಂದಿದ್ದರು. ಅದಾದ ನಂತರ ವೈದ್ಯರಿಗೂ ಕೋವಿಡ್‌–19 ಇರುವುದು ಮಾರ್ಚ್‌ 21ರಂದು ದೃಢಪಟ್ಟಿತ್ತು. ಬಳಿಕ ಈ ಇಬ್ಬರಿಗೂ ಗುರು ತೇಜ್‌ಬಹದ್ದೂರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆ ಮಹಿಳೆಯೊಂದಿಗೆ ಒಡನಾಟದಲ್ಲಿದ್ದ ಜಹಾಂಗೀರ್‌ ಪುರಿಯ 35 ವರ್ಷದ ವ್ಯಕ್ತಿಗೂ ಸೋಂಕು ಇರುವುದು ಬುಧವಾರ ದೃಢವಾಗಿದೆ.

ಮಹಿಳೆಯ ಕಟುಂಬದ ನಾಲ್ವರಿಗೂ ಸೋಂಕು ಇರುವುದು ಈಗಾಗಲೇ ಗೊತ್ತಾಗಿದೆ.

ಸೈನಿಕ್‌ ಫಾರ್ಮ್‌ ಏರಿಯಾ ನಿವಾಸಿಗಳಾದ 41 ವಯಸ್ಸಿನ ವ್ಯಕ್ತಿ ಹಾಗೂ 21 ವರ್ಷ ಯುವಕ ಬುಧವಾರ ಸೋಂಕು ದೃಢಪಟ್ಟ ಇನ್ನಿಬ್ಬರು. ಈ ಇಬ್ಬರೂ ವಿದೇಶದಿಂದ ಆಗಮಿಸಿದ್ದರು ಮತ್ತು ಸರ್ಕಾರದ ಆದೇಶದಂತೆ ಕ್ವಾರಂಟೈನ್‌ನಲ್ಲಿದ್ದರು.

‘ವಿದೇಶದಿಂದ ಬಂದಿದ್ದ ಈ ಇಬ್ಬರನ್ನೂ ನೇರವಾಗಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಸದ್ಯ ಇಲ್ಲಿನ ಮೆದಾಂತ ಮತ್ತು ರಾಜೀವ್‌ ಗಾಂಧಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿದ್ದಾರೆ’ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ದೆಹಲಿಯಲ್ಲಿ ಕೋವಿಡ್‌–19ನಿಂದಾಗಿ ಒಂದು ಸಾವು ಸಂಭವಿಸಿದ್ದು, ಇದುವರೆಗೆ ಒಟ್ಟು ಐವರು ಸೋಂಕಿತರು ಗುಣಮುಖರಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು