ಮಂಗಳವಾರ, ಮೇ 26, 2020
27 °C

ಆನ್‌ಲೈನ್‌ನಲ್ಲಿ ಕೋವಿಡ್‌-19 ಸ್ವಯಂ ಮೌಲ್ಯಮಾಪನ ಆರಂಭಿಸಿದ ಮಹಾರಾಷ್ಟ್ರ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮಹಾರಾಷ್ಟ್ರದಲ್ಲಿ 400 ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿದೆ. ಈ ಸೋಂಕು ಹರಡುವುದನ್ನು ತಡೆಗಟ್ಟಲು ಅಲ್ಲಿನ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದರ ಭಾಗವಾಗಿ ಕೋವಿಡ್‌-19 ಸ್ವಯಂ ಮೌಲ್ಯಮಾಪನ ಸಾಧನವನ್ನು ಆನ್‌ಲೈನ್‌ ಮೂಲಕ ಪ್ರಾರಂಭಿಸಿದೆ.

ಸರ್ಕಾರ ಆರಂಭಿಸಿರುವ ಕೋವಿಡ್‌-19 ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ನಾಗರಿಕರು ಕೊರೊನಾ ಸೋಂಕಿನ ರೋಗಲಕ್ಷಣಗಳನ್ನು ತಮ್ಮ ಮನೆಗಳಲ್ಲೇ ಕುಳಿತು ಪತ್ತೆ ಹಚ್ಚಬಹುದು. ನಂತರ ತಮ್ಮ ಸ್ಥಿತಿಯ ಬಗ್ಗೆ ಯಾವುದೇ ಅನುಮಾನಗಳಿದ್ದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ರಾಜ್ಯ ಸರ್ಕಾರವು ಅಪೊಲೊ ಸಂಸ್ಥೆಯ ಸಹಾಯದೊಂದಿಗೆ ಈ ಆನ್‌ಲೈನ್ ಉಪಕರಣವನ್ನು ಬಿಡುಗಡೆ ಮಾಡಿದೆ. ಜನರು ತಮ್ಮ ರೋಗಲಕ್ಷಣಗಳ ಬಗ್ಗೆ ಮನೆಯಲ್ಲಿಯೇ ಕುಳಿತು ತಿಳಿದುಕೊಳ್ಳಲು https://covid-19.maharashtra.gov.in ವೆಬ್‌ತಾಣಕ್ಕೆ ಭೇಟಿ ನೀಡಬಹುದಾಗಿದೆ.

ಈ ಲಿಂಕ್‌ನಲ್ಲಿ ತಕ್ಷಣದ ವೈದ್ಯಕೀಯ ಸಲಹೆ ಮತ್ತು ಇತರ ಸಂಬಂಧಿತ ಸಂಪರ್ಕ ಮಾಹಿತಿಗಳು ಸಹ ಲಭ್ಯವಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು