ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಕುಲ ಲಾಕ್ ಡೌನ್: ಮನೆಗೆ 'Help us' ಬೋರ್ಡ್, ಕೂಲಿಕಾರನಿಂದ ಸರ್ಕಾರಕ್ಕೆ ಮೊರೆ

Last Updated 5 ಏಪ್ರಿಲ್ 2020, 5:09 IST
ಅಕ್ಷರ ಗಾತ್ರ

ಪಂಚಕುಲ(ಚಂಡೀಗಡ): ಲಾಕ್‌ಡೌನ್‌‌ ಆದ ಕಾರಣ ದಿನಗೂಲಿಗಾಗಿ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತನ್ನ ಸಂಸಾರ ನಡೆಸಲು ಕಷ್ಟವಾಗಿದ್ದು ಸಹಾಯ ಮಾಡುವಂತೆ ಮನೆಯ ಮುಂದೆ ಬೋರ್ಡ್ ಹಾಕಿಕೊಂಡದೃಶ್ಯಚಂಡೀಗಡ -ಪಂಚಕುಲ ರಸ್ತೆಯಲ್ಲಿ ಕಂಡುಬಂದಿದೆ.

ಪಂಚಕುಲದ ಪವನ್ ಕುಮಾರ್ ಎಂಬ ವ್ಯಕ್ತಿ ಇಂಗ್ಲೀಷ್ ನಲ್ಲಿ 'Help Us'ಎಂಬ ನಾಮಫಲಕ ಹಾಕಿದ್ದರು. ನನ್ನ ಬಳಿ ಹಣವಿಲ್ಲ. ಲಾಕ್ ಡೌನ್ ನಿಂದಾಗಿ ಮಕ್ಕಳಿಗೆ ಆಹಾರ ಇಲ್ಲದೆ ಪರದಾಡುತ್ತಿದ್ದು ಸರ್ಕಾರ ಸಹಾಯಮಾಡಬೇಕು. ಲಾಕ್ ಡೌನ್ ನಿಂದ ನನಗೆ
ಕೆಲಸವಿಲ್ಲದಂತಾಗಿದೆ ಎಂದು ಕೇಳಿಕೊಂಡಿದ್ದಾರೆ.

ಪಂಚಕುಲದಲ್ಲಿ ಕಳೆದ 10 ದಿನಗಳಿಂದ ದೇಶದೆಲ್ಲೆಡೆ ಜಾರಿಯಲ್ಲಿರುವಂತೆ ಲಾಕ್‌‌ಡೌನ್ ಮುಂದುವರಿದಿದೆ. ಇದರಿಂದಾಗಿ ಕರ್ಫ್ಯೂ ಮುಂದುವರಿದಿದೆ. ಯಾರೂ ಮನೆಯಿಂದ ಹೊರಗೆ ಬರುತ್ತಿಲ್ಲ. ಪರಿಣಾಮ ಕೆಲಸಕಾರ್ಯಗಳು ಸ್ತಬ್ಧವಾಗಿವೆ. ಕೂಲಿಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲಿಯೇ ಕೂರುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT