ಶಿಲ್ಲಾಂಗ್: ಮೇಘಾಲಯದಲ್ಲಿ ಆರು ಜನರ ಸಾವಿಗೆ ಕಾರಣವಾಗಿದ್ದವಿಷಕಾರಿ ಅಣಬೆಗಳನ್ನು 'ಅಮಾನಿತಾ ಫಾಲಾಯ್ಡ್ಸ್' ಎಂದು ಗುರುತಿಸಲಾಗಿದ್ದು, ಇದನ್ನು ಸಾಮಾನ್ಯವಾಗಿ 'ಡೆತ್ ಕ್ಯಾಪ್' ಎನ್ನುತ್ತಾರೆ ಎಂದುಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಅಮಲರೆಮ್ ಸಿವಿಲ್ ಉಪವಿಭಾಗದ ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಲಾಮಿನ್ ಕುಗ್ರಾಮದಲ್ಲಿ 14 ವರ್ಷದ ಬಾಲಕಿ ಸೇರಿದಂತೆ ಆರು ಜನರು ಸಮೀಪದ ಕಾಡಿನಲ್ಲಿ ಸಂಗ್ರಹಿಸಿದ್ದ ವಿಷಕಾರಿ ಅಣಬೆಗಳನ್ನು ತಿಂದು ಕಳೆದ ತಿಂಗಳು ಮೃತಪಟ್ಟಿದ್ದರು.

ಇದು ಯಕೃತ್ತಿನ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಹೆಪಟೊಟಾಕ್ಸಿಕ್ ಆಗಿದೆ. ತನಿಖೆಯ ನಂತರ ವಿಷಕಾರಿ ಅಣಬೆಗಳೇ ಸಾವಿಗೆ ಕಾರಣ ಎಂದುರಾಜ್ಯ ಆರೋಗ್ಯ ಸೇವೆಗಳ ನಿರ್ದೇಶಕ (ಎಂಐ) ಡಾ.ಅಮನ್ ವಾರ್ ಪಿಟಿಐಗೆ ತಿಳಿಸಿದ್ದಾರೆ.

ಅಣಬೆಗಳನ್ನು ಸೇವಿಸಿದ ಬಳಿಕ ಮೂರು ಕುಟುಂಬಗಳ ಕನಿಷ್ಠ 18 ಜನರು ಅಸ್ವಸ್ಥರಾಗಿದ್ದರು. ವಿಷಕಾರಿ ಶಿಲೀಂಧ್ರವನ್ನು ಸೇವಿಸಿದ ನಂತರ ವಾಂತಿ, ತಲೆನೋವು ಮತ್ತು ಪ್ರಜ್ಞೆ ತಪ್ಪಿದ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.
ಗರ್ಭಿಣಿ ಮಹಿಳೆ ಸೇರಿದಂತೆ ಅನಾರೋಗ್ಯಕ್ಕೆ ತುತ್ತಾದವರಲ್ಲಿ ಹೆಚ್ಚಿನವರು ಈಗಾಗಲೇ ಚೇತರಿಸಿಕೊಂಡು ಮನೆಗೆ ಹೋಗಿದ್ದಾರೆ.

ಸಾವು, ಸೇವಿಸಿದ ವಿಷದ ಪ್ರಮಾಣವನ್ನು ಅವಲಂಬಿಸಿರುವುದರಿಂದ ಜನರು ಇದನ್ನು ಸೇವಿಸಿದ ಬಳಿಕವು ಬದುಕುಳಿಯಬಹುದು. ಈ ಪ್ರಕರಣದಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಪರಿಣಾಮ ಬೀರಿಲ್ಲ. ಏಕೆಂದರೆ ಬಹುಶಃ ಅವನು ಹೆಚ್ಚು ಸೇವಿಸಿರಲಿಲ್ಲ ಎಂದಿದ್ದಾರೆ.

ಅವರಲ್ಲಿ ಮೂರು ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ. ಇಬ್ಬರು ಈಶಾನ್ಯ ಇಂದಿರಾ ಗಾಂಧಿ ಪ್ರಾದೇಶಿಕ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (NEIGRIHMS) ಮತ್ತೊಬ್ಬರುವುಡ್ಲ್ಯಾಂಡ್ ಆಸ್ಪತ್ರೆಯಲ್ಲಿ ಇದ್ದಾರೆಎಂದು ವೈದ್ಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.