ಶುಕ್ರವಾರ, ಜುಲೈ 1, 2022
22 °C

ದೆಹಲಿ ನಮ್ಮನ್ನು ತಿರಸ್ಕರಿಸಿಲ್ಲ, ಬಿಜೆಪಿ ಮತಗಳು ಏರಿಕೆ ಕಂಡಿವೆ: ಮನೋಜ್ ತಿವಾರಿ

ಪಿಟಿಐ Updated:

ಅಕ್ಷರ ಗಾತ್ರ : | |

 Manoj Tiwari

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಾವು ಯಾಕೆ ವಿಫಲವಾದೆವು ಎಂಬುದರ ಬಗ್ಗೆ ಪಕ್ಷ ಅವಲೋಕನ ನಡೆಸಲಿದೆ. ನಮಗೆ ನೈತಿಕ ಗೆಲುವು ಸಿಕ್ಕಿದೆ.  2015ರ ನಂತರ ಪಕ್ಷದ ಮತಗಳ ಶೇಕಡಾವಾರು ಏರಿಕೆಯಾಗಿದೆ ಎಂದು ದೆಹಲಿ ಬಿಜೆಪಿ ಘಟಕದ  ಮುಖ್ಯಸ್ಥ ಮನೋಜ್ ತಿವಾರಿ  ಹೇಳಿದ್ದಾರೆ. 

ಬಹಳ ಎಚ್ಚರಿಕೆಯಿಂದ ದೆಹಲಿ ಜನರು ಮತ ಹಾಕಬೇಕಿತ್ತು. ನಮ್ಮ ಮತಗಳ ಶೇಕಡಾವಾರು ಶೇ. 32ರಿಂದ ಶೇ.38ರ ವರೆಗೆ ಏರಿಕೆ ಕಂಡಿದೆ.  ದೆಹಲಿ ನಮ್ಮನ್ನು ತಿರಸ್ಕರಿಸಿಲ್ಲ, ಮತಗಳಲ್ಲಿನ ಏರಿಕೆ ನಮಗೆ ಉತ್ತಮ ಮುನ್ಸೂಚನೆಯನ್ನು ನೀಡಿದೆ ಎಂದಿದ್ದಾರೆ  ತಿವಾರಿ.

ಇದನ್ನೂ ಓದಿ: ಐ ಲವ್ ಯೂ... ದೆಹಲಿ ಜನತೆಗೆ ಧನ್ಯವಾದ ಹೇಳಿದ ಅರವಿಂದ ಕೇಜ್ರಿವಾಲ್ 

ಪರಸ್ಪರ ದೂರುವುದನ್ನು ಬಿಟ್ಟು ಹೆಚ್ಚಿನ  ಕೆಲಸವನ್ನು ಬಿಜೆಪಿ  ಮಾಡಬೇಕಿತ್ತು ಎಂದು ಹೇಳಿದ ತಿವಾರಿ  ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅರವಿಂದ ಕೇಜ್ರಿವಾಲ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು