ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 | ದುರ್ಗಾ ಮೂರ್ತಿ ತಯಾರಕರಿಗೆ ₹ 40 ಕೋಟಿ ನಷ್ಟ

Last Updated 18 ಜೂನ್ 2020, 13:26 IST
ಅಕ್ಷರ ಗಾತ್ರ

ಕೋಲ್ಕತ್ತ: ಕೋವಿಡ್‌–19ನಿಂದಾಗಿ ಇಲ್ಲಿರುವ ದುರ್ಗಾ ಮೂರ್ತಿ ತಯಾರಿಸುವ ಕುಶಲಕರ್ಮಿಗಳ ಬದುಕು ದುಸ್ತರವಾಗಿದೆ. ಬೇಡಿಕೆ ಕುಸಿಯುತ್ತಿರುವ ಕಾರಣ ಕುಶಲಕರ್ಮಿಗಳು ಈ ಬಾರಿ ₹ 40 ಕೋಟಿ ನಷ್ಟ ಅನುಭವಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.

ನವರಾತ್ರಿ ಸಂದರ್ಭದಲ್ಲಿ ನಡೆಯುವ ದುರ್ಗಾ ಮೂರ್ತಿ ಪೂಜೆಗಾಗಿ ಜೂನ್‌ ಮಧ್ಯದಲ್ಲಿಯೇ ಪೂಜಾ ಸಮಿತಿಗಳು ಬೇಡಿಕೆ ಸಲ್ಲಿಸುವುದು ರೂಢಿ. ಆದರೆ, ಈಗ ಕೊರೊನಾ ಸೋಂಕಿನಿಂದಾಗಿ ಬೇಡಿಕೆಯಲ್ಲಿ ಭಾರಿ ಕುಸಿತ ಕಂಡು ಬಂದ ಕಾರಣ, 500 ಕುಶಲಕರ್ಮಿಗಳು ಸಂಕಷ್ಟದಲ್ಲಿದ್ದಾರೆ.

ಉತ್ತರ ಕೋಲ್ಕತ್ತದ ಕುಮಾರ್ಟುಲಿ ಪ್ರದೇಶದಲ್ಲಿಯೇ ಹೆಚ್ಚಾಗಿ ವಾಸಿಸುವ ಕುಶಲಕರ್ಮಿಗಳು ಕಳೆದ ವರ್ಷ ಇದೇ ಅವಧಿಯಲ್ಲಿ 3,500ಕ್ಕೂ ಅಧಿಕ ದುರ್ಗಾ ಮೂರ್ತಿಗಳು, 10,000ಕ್ಕೂ ಅಧಿಕ ಕಾಳಿ ಮೂರ್ತಿಗಳನ್ನು ತಯಾರಿಸಿದ್ದರು. ಈ ವರ್ಷ ಕೆಲವೇ ಮೂರ್ತಿಗಳನ್ನು ತಯಾರಿಸಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ ಎಂದು ಕುಮಾರ್ಟುಲಿ ಮೃತ್‌ಶಿಲ್ಪಿ ಸಂಸ್ಕೃತಿ ಸಮಿತಿ ಹೇಳುತ್ತದೆ.

ಕುಶಲಕರ್ಮಿಗಳ ಸಂಘಟನೆಯಾದ ಸಮಿತಿಯ ಸದಸ್ಯರ ಸಂಖ್ಯೆ 3000ಕ್ಕೂ ಅಧಿಕ. ಈಗ ಇವರ ಜೀವನೋಪಾಯಕ್ಕೇ ಪೆಟ್ಟು ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT