ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌‌ಗೆ ಚುನಾವಣಾ ಆಯೋಗದಿಂದ ಶೋಕಾಸ್ ನೋಟೀಸ್

ಚುನಾವಣಾ ದಿನವೇ ಸಂಜೆ 5ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ
Last Updated 7 ಫೆಬ್ರುವರಿ 2020, 15:09 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣಾ ಆಯೋಗ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿದೆ.

ಕೇಜ್ರಿವಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವ 'ಹಿಂದು ಮುಸ್ಲಿಂ' ಎಂಬ ವಿಡಿಯೋ ಪ್ರಕಟಿಸಿರುವುದಾಗಿ ನೋಟೀಸಿನಲ್ಲಿ ತಿಳಿಸಲಾಗಿದೆ.

ಈ ನೋಟೀಸಿಗೆ ಚುನಾವಣೆ ನಡೆಯುವ ದಿನ ಫೆ.8ರಂದು ಶನಿವಾರ ಸಂಜೆ 5ರ ಒಳಗೆ ಪ್ರತಿಕ್ರಿಯೆ ನೀಡಬೇಕೆಂದು ತಿಳಿಸಲಾಗಿದೆ.

ವಿಡಿಯೋದಲ್ಲಿ ಬೇರೆ ಪಕ್ಷಗಳು 'ಹಿಂದು ಮುಸ್ಲಿಂ' 'ಸಿಎಎ' 'ಮಂದಿರ ಮಸೀದಿ' ಎಂಬುದರ ಬಗ್ಗೆ ಮಾತನಾಡಿದರೆ, ಕೇಜ್ರಿವಾಲ್ ಮಾತ್ರ ಅಭಿವೃದ್ಧಿ, ಶಾಲೆ ಮತ್ತು ಮಹಿಳೆಯ ಭದ್ರತೆ ಬಗ್ಗೆ ಮಾತನಾಡುತ್ತಾರೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT