ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಪಿಎಫ್‍ಒ: ₹ 868 ಕೋಟಿ ಪಿಂಚಣಿ ಬಿಡುಗಡೆ

Last Updated 3 ಜೂನ್ 2020, 10:34 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‍ಒ) ₹868 ಕೋಟಿ ಪಿಂಚಣಿ ಹಣ ಬಿಡುಗಡೆ ಮಾಡಿದೆ. ಇದರ ಜೊತೆಗೆ ನಿವೃತ್ತರು ಪ್ರತಿ ತಿಂಗಳೂ ಪಡೆಯುವ ಪಿಂಚಣಿಯ ಭಾಗಶಃ ಮೊತ್ತವನ್ನು ಮುಂಗಡವಾಗಿ ಒಂದೇ ಕಂತಿನಲ್ಲಿ ಪಡೆಯುವ ಫಲಾನುಭವಿಗಳಿಗೆ ₹105 ಕೋಟಿ ಬಾಕಿ ಹಣ ಬಿಡುಗಡೆ ಮಾಡಿದೆ.

ಇಪಿಎಫ್‍ಒನ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ ಶಿಫಾರಸ್ಸಿನ ಮೇರೆಗೆ ಉದ್ಯೋಗಿಗಳ ಪಿಂಚಣಿ ಯೋಜನೆಯಡಿ (ಇಪಿಎಸ್), ಪ್ರತಿ ತಿಂಗಳ ಪಿಂಚಣಿಯ ಒಂದು ಮೂರಾಂಶದಷ್ಟು ಮೊತ್ತವನ್ನು 15 ವರ್ಷಗಳವರೆಗೆ ಕಡಿತ ಮಾಡಿ, ನೌಕರರು ನಿವೃತ್ತರಾಗುವಾಗಲೇ ಒಂದೇ ಗಂಟಿನಲ್ಲಿ ಪಡೆದುಕೊಳ್ಳುವ ನೌಕರರ ಬಹುವರ್ಷಗಳ ಬೇಡಿಕೆಗೆ ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ.

ಈ ಹಿಂದೆ ಭಾಗಶಃ ಮೊತ್ತವನ್ನು ಒಂದೇ ಕಂತಿನಲ್ಲಿ ಪಡೆಯಲು ಅವಕಾಶ ಇರಲಿಲ್ಲ. ಇಪಿಎಸ್‍ನಡಿ ಪಿಂಚಣಿದಾರರ ಅನುಕೂಲಕ್ಕಾಗಿ ಐತಿಹಾಸಿಕ ಹೆಜ್ಜೆ ಇಟ್ಟಿದೆ.

ಇಪಿಎಫ್‍ಒ ತನ್ನ 135 ಪ್ರಾದೇಶಿಕ ಕಚೇರಿಗಳ ಮೂಲಕ 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರನ್ನು ಹೊಂದಿದೆ. ಲಾಕ್‍ಡೌನ್ ಅವಧಿಯಲ್ಲೂ ಇಪಿಎಫ್‍ಒ ಸಿಬ್ಬಂದಿ ಮೇ ತಿಂಗಳ ಪಿಂಚಣಿ ಪಾವತಿಯನ್ನು ನಿಗದಿತ ಸಮಯದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT