ಸೋಮವಾರ, ಆಗಸ್ಟ್ 26, 2019
20 °C

ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಎಂದು ಸಂಸದರಿಗೆ ಹೇಳಿದ ಮೆಹಬೂಬಾ ಮುಫ್ತಿ

Published:
Updated:

ನವದೆಹಲಿ: ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ತಮ್ಮ ಇಬ್ಬರು ಸಂಸದರಿಗೆ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಗೃಹ ಬಂಧನದಲ್ಲಿದ್ದ ಮುಫ್ತಿಯನ್ನು ಇದೀಗ ಅತಿಥಿ ಗೃಹಕ್ಕೆ ಕರೆದೊಯ್ಯಲಾಗಿದೆ. ಸಂಸದರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ ಪಕ್ಷದಿಂದ ಹೊರನಡೆಯಲು ಸಿದ್ಧವಾಗಿರಬೇಕು ಎಂದು ಮುಫ್ತಿ ಹೇಳಿರುವುದಾಗಿ ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಮುಫ್ತಿ  ಈ ರೀತಿ ಹೇಳಿದ್ದಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಇದನ್ನೂ ಓದಿ: ಕಾಶ್ಮೀರ: ಮೆಹಬೂಬಾ, ಒಮರ್‌ಗೆ ಗೃಹಬಂಧನ

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ಪಿಡಿಪಿ 2018 ಜೂನ್‌‌ನಲ್ಲಿ  ಬೆಂಬಲ ಪಾಪಸ್ ಪಡೆದುಕೊಂಡಿತ್ತು. ಪಿಡಿಪಿಯ ಇಬ್ಬರು ಸದಸ್ಯರು ರಾಜ್ಯಸಭೆಯಲ್ಲಿದ್ದಾರೆ. ರಾಜ್ಯಸಭೆಯಲ್ಲಿ ಕಾಶ್ಮೀರದ ವಿಶೇಷಾಧಿಕಾರ ರದ್ದು ಪಡಿಸುವ ನಿಲುವು ಅಂಗೀಕಾರವಾದ ಕೂಡಲೇ ಪಿಡಿಪಿ ಸಂಸದರಾದ ಮೀರ್ ಫಯಾಜ್ ಮತ್ತು ನಜೀರ್ ಅಹ್ಮದ್ ಲಾವೇ ಅವರು ರಾಜ್ಯಸಭೆಯಲ್ಲಿ ಸಂವಿಧಾನದ ಪ್ರತಿಗಳನ್ನು ಹರಿದು ಪ್ರತಿಭಟಿಸಿದ್ದರು.

ತಾವು ರಾಜೀನಾಮೆ ನೀಡುವ ಸಿದ್ಧತೆಯಲ್ಲಿದ್ದೇವೆ ಎಂದು ಫಯಾಜ್ ಹೇಳಿದ್ದರೂ ಪಿಡಿಪಿ ನಾಯಕರೊಂದಿಗೆ ಈ ಬಗ್ಗೆ ಮಾತನಾಡಬೇಕಿದೆ ಎಂದಿದ್ದಾರೆ. ಸಂಪರ್ಕ ಕಡಿತ ಮಾಡಿರುವ ಕಾರಣ ನಮಗೆ ಯಾರೊಂದಿಗೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ನಾವು ಚರ್ಚೆ ಮಾಡಿದ ನಂತರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ ಫಯಾಜ್.

ಇದನ್ನೂ ಓದಿನೂರಕ್ಕೂ ಹೆಚ್ಚು ಮಂದಿಗೆ ಗೃಹ ಬಂಧನ

Post Comments (+)