ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ರಕ್ಷಣಾ ಮಂದಿರದಲ್ಲಿದ್ದ 57 ಮಂದಿಯಲ್ಲಿ ಕೊರೊನಾ ಸೋಂಕು

Last Updated 22 ಜೂನ್ 2020, 5:24 IST
ಅಕ್ಷರ ಗಾತ್ರ

ಕಾನ್ಪುರ: ಸರ್ಕಾರ ನಿರ್ವಹಿಸುತ್ತಿರುವ ಮಹಿಳಾ ರಕ್ಷಣಾ ಮಂದಿರದಲ್ಲಿದ್ದ 57 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಪೈಕಿ ಐವರು ಬಾಲಕಿಯರು ಗರ್ಭಿಣಿಯರು. ಈ ವಿಷಯ ಇದೀಗ ದೇಶವ್ಯಾಪಿ ಸುದ್ದಿಯಾಗಿದೆ.

'ರಕ್ಷಣಾ ಮಂದಿರದಲ್ಲಿರುವ ಒಬ್ಬರಲ್ಲಿ ಎಚ್‌ಐವಿ ಪಾಸಿಟಿವ್ ಬಂದಿದೆ. ಮತ್ತೊಬ್ಬರಲ್ಲಿ ಹೆಪಟೈಟಿಸಿ ಸಿ ಪತ್ತೆಯಾಗಿದೆ. ಮಹಿಳೆಯರು ಮತ್ತು ಬಾಲಕಿಯರಿಗೆ ಆಶ್ರಯ ನೀಡಿರುವ ತಾಣದಲ್ಲಿ ಸ್ವಚ್ಛತೆ ಸರಿಯಾಗಿ ನಿರ್ವಹಿಸಿಲ್ಲ.ಬಾಲಕಿಯರು ಗರ್ಭಿಣಿಯರಾಗಿರುವುದು ಮತ್ತು ಅವರಿಗೆ ಸೋಂಕು ತಗುಲಿರುವ ಬಗ್ಗೆ ತನಿಖೆ ನಡೆಯಬೇಕಿದೆ' ಎಂದುಹಿರಿಯ ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್ ಅವರಿಗೆಸಿಪಿಎಂ ಪಾಲಿಟ್‌ಬ್ಯುರೊ ಸದಸ್ಯೆ ಸುಹಾಸಿನಿ ಆಲಿ ದೂರು ನೀಡಿದ್ದಾರೆ.

'ಬಾಲಕಿಯರು ರಕ್ಷಣಾ ಮಂದಿರಕ್ಕೆ ಬರುವ ಮೊದಲೇ ಗರ್ಭಿಣಿಯರಾಗಿದ್ದರು. ಕೆಲವರನ್ನುಪೊಕ್ಸೊ ಸಂಬಂಧಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ರಕ್ಷಣಾ ಮಂದಿರಕ್ಕೆ ಕರೆತರಲಾಗಿತ್ತು' ಎಂಬಹಿರಿಯ ಅಧಿಕಾರಿ ಅಜಿತ್ ಕುಮಾರ್ ಅವರಹೇಳಿಕೆಯನ್ನು 'ಹಿಂದುಸ್ತಾನ್ ಟೈಮ್ಸ್' ವರದಿ ಮಾಡಿದೆ.

ಎರಡು ದಿನಗಳ ಹಿಂದೆ ಜ್ವರ ಮತ್ತು ಉಸಿರಾಟದ ತೊಂದರೆ ಎದುರಿಸುತ್ತಿದ್ದ ಬಾಲಕಿಯೊಬ್ಬಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ನಡೆದ ಪರೀಕ್ಷೆಯ ನಂತರ ಆಕೆಯಲ್ಲಿ ಕೋವಿಡ್-19 ದೃಢಪಟ್ಟಿತ್ತು. ಆಕೆಯ ಜೊತೆಗಿದ್ದ 33 ಬಾಲಕಿಯರಲ್ಲಿಯೂ ನಂತರದ ದಿನಗಳಲ್ಲಿ ಕೋವಿಡ್-19 ಇರುವುದು ದೃಢಪಟ್ಟಿತು. ರಕ್ಷಣಾ ಮಂದಿರದಲ್ಲಿದ್ದ ಎಲ್ಲ ಬಾಲಕಿಯರನ್ನೂ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT