ಭಾನುವಾರ, ನವೆಂಬರ್ 17, 2019
24 °C

ಜನರ ಸಮಸ್ಯೆಗಳನ್ನು ಕಡೆಗಣಿಸುತ್ತಿರುವ ಮೋದಿ ಸರ್ಕಾರ: ಪ್ರಿಯಾಂಕಾ ಗಾಂಧಿ

Published:
Updated:

ಬೆಂಗಳೂರು : ಕೇಂದ್ರದಲ್ಲಿನ ಆಡಳಿತ ಪಕ್ಷದಲ್ಲಿರುವವರು ತಮ್ಮ ಸ್ವಂತ ಕಾರ್ಯದಲ್ಲಿ ಮಗ್ನರಾಗಿದ್ದು ಜನರ ಸಮಸ್ಯೆಗಳ ಕಡೆ ಗಮನ ಹರಿಸುತ್ತಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಹೇಳಿದ್ದಾರೆ. 

 ದೇಶದ ಆರ್ಥಿಕ ಪರಿಸ್ಥಿತಿಯು ತುಂಬಾ ಹದಗೆಟ್ಟಿದ್ದು, ಸೇವಾ ವಲಯ ಕುಸಿದಿದೆ, ಉದ್ಯೋಗಾವಕಾಶಗಳು ಕಡಿಮೆಯಾಗಿವೆ, ಜನರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದರೂ ಬಿಜೆಪಿ ಸರ್ಕಾರ ಸುಮ್ಮನೆ ಕುಳಿತಿದೆ ಎಂದು ದೇಶದ ಆರ್ಥಿಕ ವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ.

ಅಮೆರಿಕವು ಭಾರತೀಯರಿಗೆ ಎಚ್‌ 1ಬಿ ವೀಸಾ ಕಡಿತ ಮಾಡಿದ್ದು ಉದ್ಯೋಗಕ್ಕಾಗಿ ಅಲ್ಲಿಗೆ ಹೊರಡುವವರಿಗೆ ಸಮಸ್ಯೆಯಾಗಿದೆ, ಪ್ರಧಾನಿ ಮೋದಿಯವರ ಹೌಡಿ ಮೋದಿ ಕಾರ್ಯಕ್ರಮದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರಿಯಾಂಕ ಗಾಂಧಿ ಟೀಕಿಸಿದ್ದಾರೆ. 

ಬಿಜೆಪಿ ಅಧಿಕಾರದ ಅವಧಿಯಲ್ಲಿ ಯಾರಿಗೆ ಪ್ರಯೋಜನವಾಗಿದೆ ಎಂದು ಎಲ್ಲರೂ ಪ್ರಶ್ನಿಸಬೇಕು , ಹೌಡಿ ಮೋದಿ ಕಾರ್ಯಕ್ರಮದ ಹೊರತಾಗಿಯೂ ಭಾರತೀಯರಿಗೆ ಅಮೆರಿಕ ಎಚ್‌ 1ಬಿ ವೀಸಾ ನಿರಾಕರಿಸುತ್ತಾ ಬಂದಿದೆ ಎಂದು ಪ್ರಿಯಾಂಕಾ ಗಾಂಧಿಯವರು ಟ್ವೀಟ್ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)