ಶನಿವಾರ, ಜೂಲೈ 4, 2020
28 °C

ಎಚ್‌ಸಿಕ್ಯು, ಅಜಿಥ್ರೊಮೈಸಿನ್‌ ಜೀವಕ್ಕೆ ಮಾರಕ: ಅಧ್ಯಯನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ರೋಗಿಗಳ ಚಿಕಿತ್ಸೆಗೆ ಪ್ರಸ್ತಾಪಿಸಿರುವ ಹೈಡ್ರಾಕ್ಸಿಕ್ಲೋರೊಕ್ವಿನ್‌ ಹಾಗೂ ಅಜಿಥ್ರೊಮೈಸಿನ್‌ ಮಾತ್ರೆಗಳು ಜೀವಕ್ಕೆ ಮಾರಕವಾಗಿದ್ದು, ಹೃದಯ ಹಾಗೂ ರಕ್ತನಾಳಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ. 

ಈ ಮಾತ್ರೆಗಳನ್ನು ಸೇವಿಸಿ ಅಡ್ಡಪರಿಣಾಮ ಎದುರಿಸಿದ 2.1 ಕೋಟಿ ಪ್ರಕರಣಗಳ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ದತ್ತಾಂಶಗಳನ್ನು ವಿಶ್ಲೇಷಣೆ ನಡೆಸಿರುವ ವ್ಯಾಂಡರ್‌ಬಿಲ್ಟ್‌ ವಿಶ್ವವಿದ್ಯಾಲಯ ಹಾಗೂ ಸ್ಟ್ಯಾಂಫರ್ಡ್‌ ವಿಶ್ವವಿದ್ಯಾಲಯ ಈ ವರದಿ ನೀಡಿದೆ.

130 ರಾಷ್ಟ್ರಗಳಲ್ಲಿ 1967 ನವೆಂಬರ್‌ 14ರಿಂದ 2020 ಮಾರ್ಚ್‌ 1ರವರೆಗೆ ದಾಖಲಾಗಿರುವ ಪ್ರಕರಣಗಳು ಇದರಲ್ಲಿ ದಾಖಲಾಗಿವೆ. ‘ಸರ್ಕ್ಯುಲೇಷನ್‌’ ಹೆಸರಿನ ನಿಯತಕಾಲಿಕದಲ್ಲಿ ಈ ವರದಿ ಪ್ರಕಟವಾಗಿದ್ದು, ಹೈಡ್ರಾಕ್ಸಿಕ್ಲೋರೊಕ್ವಿನ್‌, ಅಜಿಥ್ರೊಮೈಸಿನ್‌ ಮಾತ್ರೆ ಅಥವಾ ಎರಡೂ ಮಾತ್ರೆಗಳನ್ನು ಜೊತೆಯಾಗಿ ತೆಗೆದುಕೊಂಡಾಗ ಹೃದಯದ ಮೇಲೆ ಉಂಟಾದ ಅಡ್ಡಪರಿಣಾಮ ಹಾಗೂ ಇತರೆ ಹೃದಯದ ಕಾಯಿಲೆಗೆ ಇರುವ ಇತರೆ ಮಾತ್ರೆಗಳನ್ನು ತೆಗೆದುಕೊಂಡಾಗ ಆದ ಪರಿಣಾಮಗಳನ್ನು ಹೋಲಿಸಲಾಗಿದೆ. 

ಈ ಮಾತ್ರೆಗಳನ್ನು ಸೇವಿಸಿದಾಗ ಹೃದಯಬಡಿತದಲ್ಲಿ ಅಸಹಜ ಬದಲಾವಣೆ ಕಂಡು ಬಂದಿದೆ. ಎರಡೂ ಮಾತ್ರೆಗಳನ್ನು ಜೊತೆಯಾಗಿ ಸೇವಿಸಿದಾಗ ಇದರ ಪರಿಣಾಮ ಇನ್ನೂ ಹೆಚ್ಚಾಗುತ್ತದೆ. ನಿರಂತರವಾಗಿ ಹೈಡ್ರಾಕ್ಸಿಕ್ಲೋರೊಕ್ವಿನ್‌ ಸೇವಿಸಿದರೆ ಹೃದಯಾಘಾತವಾಗುವ ಎಚ್ಚರಿಕೆಯನ್ನೂ ವಿಜ್ಞಾನಿಗಳು ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು