ಶನಿವಾರ, ಜುಲೈ 31, 2021
28 °C

Covid-19 India update: ಮುಂಬೈನಲ್ಲಿ 1128 ಹೊಸ ಪ್ರಕರಣ, 20 ಮಂದಿ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಂಗ್ರಹ ಚಿತ್ರ

ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ 1,74,387 ಸಕ್ರಿಯ ಪ್ರಕರಣಗಳು ಇವೆ. ಇಲ್ಲಿಯವರೆಗೆ 237195 ಮಂದಿ ಚೇತರಿಸಿಕೊಂಡಿದ್ದು ಸಾವಿನ ಸಂಖ್ಯೆ 13699 ಆಗಿದೆ. ಒಟ್ಟು ಸೋಂಕಿತರ ಸಂಖ್ಯೆ 425282 ಕ್ಕೇರಿದೆ.

ಮಹಾರಾಷ್ಟ್ರದಲ್ಲಿ ಸೋಮವಾರ 3,721 ಹೊಸ ಪ್ರಕರಣಗಳು ಪತ್ತೆಯಾಗಿದ್ದು 62 ಮಂದಿ ಸಾವಿಗೀಡಾಗಿದ್ದಾರೆ. ಇಲ್ಲಿಯವರೆಗೆ 1,962 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 1,35,796 ಸೋಂಕು ಪ್ರಕರಣಗಳಿದ್ದು 61,793 ಸಕ್ರಿಯ ಪ್ರಕರಣಗಳಿವೆ. 6,283 ಮಂದಿ ಈವರೆಗೆ ಸಾವಿಗೀಡಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ರಾಜಸ್ಥಾನದಲ್ಲಿ 302 ಹೊಸ ಪ್ರಕರಣಗಳು ದಾಖಲಾಗಿದ್ದು , 7 ಮಂದಿ ಸಾವಿಗೀಡಾಗಿದ್ದಾರೆ.15,232 ಸೋಂಕು ಪ್ರಕರಣಗಳಲ್ಲಿ 2,966 ಸಕ್ರಿಯ ಪ್ರಕರಣಗಳಿವೆ. ಇಲ್ಲಿಯವರೆಗೆ  356 ಮಂದಿ ಸಾವಿಗೀಡಾಗಿದ್ದು  11,675 ಮಂದಿ ಚೇತರಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಕಳೆದ 24 ಗಂಟೆಗಳಲ್ಲಿ 413 ಹೊಸ ಪ್ರಕರಣಗಳು ದಾಖಲಾಗಿವೆ. ಈವರೆಗೆ 5,102 ಸಕ್ರಿಯ ಪ್ರಕರಣಗಳು ಇಲ್ಲಿದ್ದು 569 ಮಂದಿ ಸಾವಿಗೀಡಾಗಿದ್ದಾರೆ.

ತಮಿಳುನಾಡಿನಲ್ಲಿ ಸೋಮವಾರ 2,170 ಮಂದಿಗೆ ಸೋಂಕು ತಗುಲಿದ್ದು 37 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 62087 ಆಗಿದ್ದು ಸಾವಿನ ಸಂಖ್ಯೆ 794 ಆಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.

ಕೇರಳದಲ್ಲಿ ಇಂದು 138 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಇದರಲ್ಲಿ 87 ಮಂದಿ ವಿದೇಶದಿಂದ ಬಂದವರಾಗಿದ್ದಾರೆ. ಇತರ ರಾಜ್ಯಗಳಿಂದ ಬಂದ 47 ಮಂದಿಗೆ ಸೋಂಕು ಪತ್ತೆಯಾಗಿದ್ದು, ಸ್ಥಳೀಯ ಸಂಪರ್ಕದಿಂದ 4 ಮಂದಿಗೆ ರೋಗ ತಗುಲಿದೆ. ಸೋಮವಾರ 88 ಮಂದಿ ಚೇತರಿಸಿಕೊಂಡಿದ್ದಾರೆ, ಒಟ್ಟು ಸೋಂಕಿತರ ಸಂಖ್ಯೆ 1,540 ಆಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಬಿಹಾರದಲ್ಲಿ 206 ಹೊಸ ಪ್ರಕರಣಗಳು ವರದಿಯಾಗಿದ್ದು ಸೋಂಕಿತರ ಸಂಖ್ಯೆ 7,808 ಆಗಿದೆ.ಇಲ್ಲಿಯವರೆಗೆ 5,767 ಮಂದಿ ಚೇತರಿಸಿಕೊಂಡಿದ್ದು 52 ಮಂದಿ ಸಾವಿಗೀಡಾಗಿದ್ದಾರೆ.

ಅಸ್ಸಾಂನಲ್ಲಿ 5586 ಮಂದಿಗೆ  ಸೋಂಕು  ದೃಢಪಟ್ಟಿದೆ.ಇದರಲ್ಲಿ 2170 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 3521 ರೋಗಿಗಳು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್ ರೋಗದಿಂದ ಸಾವಿಗೀಡಾದವರು 10 ಮಂದಿ. ಇಲ್ಲಿ ಚೇತರಿಕೆ  ಪ್ರಮಾಣ ಶೇ.63.3 ಆಗಿದ್ದ ಮರಣ ಪ್ರಮಾಣ ಶೇ.0.16 ಆಗಿದೆ ಎಂದು ಅಸ್ಸಾಂ ಆರೋಗ್ಯ ಸಚಿವ ಹಿಮಾಂತಾ ಬಿಸ್ವಾ ಶರ್ಮಾ ಹೇಳಿದ್ದಾರೆ.

ಚಂಡೀಗಢದಲ್ಲಿ 410 ಸೋಂಕಿತರಿದ್ದಾರೆ. ಇಲ್ಲಿಯವರೆಗೆ 6 ಮಂದಿ ಸಾವಿಗೀಡಾಗದ್ದು 322 ಮಂದಿ ಗುಣಮುಖರಾಗಿದ್ದಾರೆ ಎಂದು ಚಂಡೀಗಢ  ಆರೋಗ್ಯ ಇಲಾಖೆ ಹೇಳಿದೆ.

ಕಳೆದ 24 ಗಂಟೆಗಳಲ್ಲಿ ಆಂಧ್ರಪ್ರದೇಶದಲ್ಲಿ 443 ಹೊಸ ಪ್ರಕರಣಗಳು ಮತ್ತು 5 ಸಾವು ವರದಿ ಆಗಿದೆ. 83 ಮಂದಿ ಚೇತರಿಸಿಕೊಂಡಿದ್ದಾರೆ. ಇಲ್ಲಿ ಈಗ 9372 ಮಂದಿಗೆ ಸೋಂಕಿತರಿದ್ದು 111 ಮಂದಿ ಇಲ್ಲಿಯವರೆಗೆ ಸಾವಿಗೀಡಾಗಿದ್ದಾರೆ.

ಮುಂಬೈನಲ್ಲಿ ಸೋಮವಾರ 1128 ಹೊಸ ಪ್ರಕರಣಗಳು ಪತ್ತೆಯಾಗಿದ್ದು 20 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 67,635 ಆಗಿದ್ದು, ಈವರೆಗೆ 3735 ಮಂದಿ ಸಾವಿಗೀಡಾಗಿದ್ದಾರೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಹೇಳಿದೆ.

ದೆಹಲಿಯಲ್ಲಿ ಒಂದೇ ದಿನ 2909 ಹೊಸ ಪ್ರಕರಣಗಳು ಪತ್ತೆಯಾಗಿವೆ. 58 ಮಂದಿ ಸಾವಿಗೀಡಾಗಿದ್ದಾರೆ.ಇದೀಗ 62,655 ಮಂದಿಗೆ ಸೋಂಕು ದೃಢಪಟ್ಟಿದ್ದು 23,820 ಸಕ್ರಿಯ ಪ್ರಕರಣಗಳಿವೆ. 2233 ಮಂದಿ ಸಾವಿಗೀಡಾಗಿದ್ದಾರೆ.

ಮಧ್ಯಪ್ರದೇಶದಲ್ಲಿ 175 ಹೊಸ ಪ್ರಕರಣಗಳು ಪತ್ತೆಯಾಗಿದ್ದು 200 ಮಂದಿ ಚೇತರಿಸಿಕೊಂಡಿದ್ದಾರೆ. 6 ಮಂದಿ ಸೋಮವಾರ ಸಾವಿಗೀಡಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ12,078  ಆಗಿದ್ದು ಇಲ್ಲಿಯವರೆಗೆ 521 ಮಂದಿ ಸಾವಿಗೀಡಾಗಿದ್ದಾರೆ ಎಂದು ಮಧ್ಯಪ್ರದೇಶ ಸರ್ಕಾರ ಹೇಳಿದೆ.

ತೆಲಂಗಾಣದಲ್ಲಿ 872 ಮಂದಿಗೆ ಸೋಂಕು ದೃಢಪಟ್ಟಿದ್ದು 7 ಮಂದಿ ಇವತ್ತು ಸಾವಿಗೀಡಾಗಿದ್ದಾರೆ. ಒಟ್ಟು ಸೋಂಕಿತರ  ಸಂಖ್ಯೆ 8 ,674 ಆಗಿದ್ದು ಸಾವಿನ ಸಂಖ್ಯೆ 217ಕ್ಕೇರಿದೆ.

ದೇಶದಲ್ಲಿ ಹೊಸದಾಗಿ 14,821 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಸೋಂಕಿನಿಂದ 445 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಕೋವಿಡ್‌–19ನಿಂದ ಸಾವಿಗೀಡಾದವರ ಸಂಖ್ಯೆ 13,699ಕ್ಕೆ ಏರಿದೆ.

ಸತತ 11ನೇ ದಿನವೂ 10,000ಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯಲ್ಲೂ ಈಚೆಗೆ ಏರಿಕೆಯಾಗಿದೆ.

ಬೆಳಗ್ಗಿನ ಮಾಹಿತಿ ಪ್ರಕಾರ  ಸೋಂಕಿತರ ಒಟ್ಟು ಸಂಖ್ಯೆ 4,25,282ಕ್ಕೆ ಏರಿಕೆಯಾಗಿದೆ. ಈವರೆಗೆ 2,37,195 ಮಂದಿ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 9,440 ಮಂದಿ ಗುಣಮುಖರಾಗಿದ್ದು, ಈ ಮೂಲಕ ಗುಣಮುಖರಾದವರ ಪ್ರಮಾಣ ಶೇ 55.77ರಷ್ಟಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು