ಭಾನುವಾರ, ಜುಲೈ 25, 2021
21 °C

ಭಾರತ–ಚೀನಾ ಮಾತುಕತೆಗೆ ಹಿನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಾಂಗಾಂಗ್‌ ತ್ಸೊ ಸರೋವರದ ಬಳಿ ಭಾರತ ನಿರ್ಮಿಸುತ್ತಿರುವ ಒಂದು ಸೇತುವೆ ಹಾಗೂ ಚೀನಾದ ಸೇನೆ ನಿರ್ಮಿಸಿರುವ ಒಂದು ಬಂಕರ್, ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಶಮನಗೊಳಿಸುವ ಮಾತುಕತೆಗೆ ಅಡ್ಡಿಯಾಗಿ ಪರಿಣಮಿಸಿವೆ.

ಎರಡೂ ಸೇನೆಗಳ ವಿಭಾಗೀಯ ಕಮಾಂಡರ್‌ ಮಟ್ಟದ ಇನ್ನೊಂದು ಸುತ್ತಿನ ಸಭೆ ಶುಕ್ರವಾರ ನಡೆದಿದೆ. ಜೂನ್‌ 6ರಂದು ನಡೆದ ಸಭೆಯಲ್ಲಿ ಒಪ್ಪಂದಕ್ಕೆ ಬರಲಾದ ವಿಚಾರಗಳ ಅನುಷ್ಠಾನವನ್ನು ಕುರಿತು ಈ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ ಪಾಂಗಾಂಗ್‌ ತ್ಸೊ ಸರೋವರದ ದಂಡೆಯ ‘ಫಿಂಗರ್‌–4’ ಪ್ರದೇಶದಲ್ಲಿ ನಿರ್ಮಿಸಿರುವ ಬಂಕರ್‌ ಅನ್ನು ಕೆಡವಲು ಚೀನಾ ನಿರಾಕರಿಸಿದ್ದರಿಂದ ಉದ್ವಿಗ್ನತೆಯನ್ನು ಪೂರ್ಣ ಪ್ರಮಾಣದಲ್ಲಿ ಶಮನಗೊಳಿಸುವ ಪ್ರಯತ್ನ ಫಲನೀಡಲಿಲ್ಲ.

ಇನ್ನೊಂದೆಡೆ, ತನ್ನ ಭೂಪ್ರದೇಶದಲ್ಲಿ ನಿರ್ಮಿಸುತ್ತಿರುವ ಸೇತುವೆಯ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಚೀನಾ ಇಟ್ಟಿರುವ ಬೇಡಿಕೆಯನ್ನು ಭಾರತವೂ ತಿರಸ್ಕರಿಸಿದೆ. ದರ್ಬುಕ್‌ನಿಂದ ದೌಲತ್‌ಬೇಗ್‌ ಓಲ್ಡಿವರೆಗೆ ನಿರ್ಮಿಸುತ್ತಿರುವ 255 ಕಿ.ಮೀ. ಉದ್ದದ ರಸ್ತೆಯ ಭಾಗವಾಗಿ ಭಾರತವು ಈ ಸೇತುವೆಯನ್ನು ನಿರ್ಮಿಸುತ್ತಿದೆ.

‘ಭಾರತ ನಿರ್ಮಿಸುತ್ತಿರುವ ಸೇತುವೆಯು ನೈಜ ಗಡಿರೇಖೆಯ  ಸಮೀಪದಲ್ಲಿಲ್ಲ. ಅಷ್ಟೇ ಅಲ್ಲ ಅದು ವಿವಾದಿತ ಪ್ರದೇಶವೂ ಅಲ್ಲ’ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು